SK Home Ad
Home ಸುದ್ದಿ ರಾಜ್ಯ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್

ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್

0
211

ಬೆಂಗಳೂರು: ಉದ್ಯಮಿ ಹಾಗೂ ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಕೆಲವು ಸಂಬಂಧಗಳು ಅಧಿಕೃತವಾಗಲು ಇತರ ಸಂಬಂಧಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಒಂದು ವರ್ಷ, ಒಂದು ಪಾಡ್‌ಕಾಸ್ಟ್, ಒಂದು ಫೋಟೋಶೂಟ್ ಹಾಗೂ ಹಲವು ಕಾಫಿ ಭೇಟಿಗಳ ಬಳಿಕ ನಮ್ಮ ಸಂಬಂಧ ಅಧಿಕೃತವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಉದ್ಯಮಿ ಹಾಗೂ ಕಂಟೆಂಟ್ ಕ್ರಿಯೇಟರ್ ದೀಪಾ ಬುಲ್ಲರ್-ಖೋಸ್ಲಾ (Diipa Büller-Khosla) ಅವರನ್ನು ಟ್ಯಾಗ್ ಮಾಡಿದ್ದು, ಹೃದಯದ ಇಮೋಜಿಯನ್ನೂ ಹಂಚಿಕೊಂಡಿದ್ದಾರೆ.

ನಿಖಿಲ್ ಕಾಮತ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.