ಹುಬ್ಬಳ್ಳಿ: ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮಧ್ಯ ರೈಲ್ವೆಯು ಮುಂಬೈ-ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ಸಿಎಸ್‌ಎಂಟಿ ಮುಂಬೈ-ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 01013) ವಿಶೇಷ ರೈಲು ಅ. 10ರಿಂದ ನ. 21ರವರೆಗೆ ಪ್ರತಿ ಶನಿವಾರ ಮುಂಬೈನಿಂದ ರಾತ್ರಿ 12.35ಕ್ಕೆ ಹೊರಟು ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ತಲುಪಲಿದೆ.
ಮರು ದಿಕ್ಕಿನಲ್ಲಿ ಎಸ್‌ಎಂವಿಟಿ ಬೆಂಗಳೂರು-ಸಿಎಸ್‌ಎಂಟಿ ಮುಂಬೈ (ರೈಲು ಸಂಖ್ಯೆ 01014 ) ವಿಶೇಷ ರೈಲು ಅ. 11ರಿಂದ ನ. 22ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 4.05ಕ್ಕೆ ಮುಂಬೈ ತಲುಪಲಿದೆ.
ಈ ರೈಲು ದಾದರ್, ಥಾಣೆ, ಕಲ್ಯಾಣ, ಲೋನಾವಾಲಾ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಬೆಳಗಾವಿ, ಲೊಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮಾರ್ಗವಾಗಿ ಸಂಚರಿಸಲಿದೆ.
ಎರಡೂ ದಿಕ್ಕಿನಲ್ಲಿ ತಲಾ 7 ಟ್ರಿಪ್ ಸಂಚರಿಸಲಿದ್ದು, 2 ಎಸಿ 2-ಟೈರ್, 18 ಎಸಿ 3-ಟೈರ್ ಸೇರಿ 22 ಬೋಗಿಗಳಿರಲಿವೆ.




















