Home Advertisement
Home ಸುದ್ದಿ ದೇಶ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

0
127

ಜನಪ್ರಿಯ ಧಾರಾವಾಹಿ ‘ಮಹಾಭಾರತದ’ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಗೂಫಿ ನಿಧನರಾಗಿದ್ದಾರೆ. 78ರ ವಯಸ್ಸಿನ ಗೂಫಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಹಾಭಾರತದ ಶಕುನಿ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದರ ಹೊರತಾಗಿಯೂ ಹಲವಾರು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಪಂಜಾಬ್ ಮೂಲದ ಇವರು. ವೃತ್ತಿ ಬದುಕಿಗಾಗಿ ಮುಂಬೈಗೆ ಬಂದು ಮುಂಬೈನಲ್ಲೇ ಉಳಿದುಕೊಂಡು ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು. ಇಂದು ಸಂಜೆ ೪ ಗಂಟೆಗೆ ಮುಂಬೈನ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.