Home Advertisement
Home ತಾಜಾ ಸುದ್ದಿ ಬಘೀರ ಘರ್ಜನೆ ಜೋರು…

ಬಘೀರ ಘರ್ಜನೆ ಜೋರು…

0
81

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಅಕ್ಟೋಬರ್ 31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಮಾಸ್ ಅವತಾರದಲ್ಲಿ ಮಾಸ್ಕ್ ಹಾಕಿಕೊಂಡು ದುಷ್ಟ ಕೂಟವನ್ನು ಸದೆಬಡಿಯುವುದು ನಾಯಕನ ಕಾಯಕ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ವಿಭಿನ್ನ ಅವತಾರಗಳನ್ನು ಮುರಳಿ ಈ ಚಿತ್ರದಲ್ಲಿ ತಾಳಿದ್ದಾರೆ.

ಇತ್ತೀಚೆಗೆ ರುಧಿರ ಧಾರ ಶೀರ್ಷಿಕೆ ಗೀತೆ ಸಹ ಬಿಡುಗಡೆ ಆಗಿದೆ. ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆಯುವುದರ ಜತೆಗೆ ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ಅಜನೀಶ್‌ ಲೋಕನಾಥ್‌ ಈ ಸಂಗೀತ ನಿರ್ದೇಶನ ಮಾಡಿದ್ದು, ಒಂದು ಮಿಲಿಯನ್ ಹಿಟ್ಸ್ ದಾಖಲಾಗಿದೆ.

ನವೀನ್ ಕುಮಾರ್ ಛಾಯಾಗ್ರಹಣ, ಪ್ರಶಾಂತ್ ನೀಲ್ ಕಥೆ ಈ ಚಿತ್ರಕ್ಕಿದೆ. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Previous articleದೀಪಾವಳಿ ಹಬ್ಬಕ್ಕಾಗಿ ವಿಶೇಷ ರೈಲು
Next articleರಾಕೇಶ್​ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್​ ಕಾರಣ!