SK Home Ad
Home ತಾಜಾ ಸುದ್ದಿ ಲಿಂಗಾಯತರನ್ನು ಬೇರೆಯವರು ತುಳಿಯುತ್ತಿದ್ದಾರೆ, ಬಿಜೆಪಿಯಲ್ಲ

ಲಿಂಗಾಯತರನ್ನು ಬೇರೆಯವರು ತುಳಿಯುತ್ತಿದ್ದಾರೆ, ಬಿಜೆಪಿಯಲ್ಲ

0
148
ಎಚ್. ವಿಶ್ವನಾಥ್

ಹುಬ್ಬಳ್ಳಿ: ಲಿಂಗಾಯತರನ್ನು ಬಿಜೆಪಿ ತುಳಿಯುತ್ತಿಲ್ಲ; ಬೇರೆಯವರು ತುಳಿಯುತ್ತಿದ್ದಾರೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎಂಬುದನ್ನು ಹೇಳಲಿಕ್ಕಾಗದು. ಯಾರನ್ನು ಯಾರು ತುಳಿಯುತ್ತಿದ್ದಾರೆ ಎಂಬ ಸಂಗತಿ ಸಾರ್ವಜನಿಕ ವಲಯಕ್ಕೆ ಗೊತ್ತಿರುವ ಸಂಗತಿ ಎಂದು ಮಾರ್ಮಿಕವಾಗಿ ಹೇಳಿದರು.
ರಾಜಕಾರಣದಲ್ಲಿ ಒಬ್ಬರನ್ನು ಮತ್ತೊಬ್ಬರು ತುಳಿಯುವುದು ಹಿಂದಿನಿಂದ ನಡೆಯುತ್ತಾ ಬಂದಿವೆ. ಇದು ಇಂದು ನಿನ್ನೆಯದಲ್ಲ. ರಾಜಕಾರಣಕ್ಕೆ ಕುಟುಂಬವೇ ಬಲಿಯಾಗಿವೆ ಎಂದು ವಿಶ್ಲೇಷಿಸಿದರು.
ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕುರುಬ ಸಮಾವೇಶ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ನಾಯಕರನ್ನಾಗಿ ಮಾಡಲು ಹೊರಟಿದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕೆ ಅವರು ಆಗಬಾರದು? ಜೆಡಿಎಸ್ ನಾಯಕ ಎಚ್.ಡಿ. ದೇವೆಗೌಡರು ಕನಸು ಕಂಡಿದ್ದರಾ? ಅದರಂತೆ ಸಿದ್ದರಾಮಯ್ಯ ಅವರು ಸಹ ಕನಸು ಕಂಡಿಲ್ಲ. ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರೆ ತಪ್ಪೇನು ಇಲ್ಲ. ಆದರೆ ಅದೃಷ್ಟ, ಅವಕಾಶ ಮುಖ್ಯವಾಗುತ್ತವೆ ಎಂದರು.