SK Home Ad
Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು

ಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು

0
350
sudhakar

ಚಿಕ್ಕಬಳ್ಳಾಪುರ: ನಾನು ಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ ಅವರು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ್ರೋಹದ ಕೆಲಸ ಮಾಡಿದ್ರೆ ಸಂಘಟನೆಗಳನ್ನು ನಿಷೇಧ ಮಾಡಬೇಕು. ಬಜರಂಗದಳ ದೇಶಪ್ರೇಮಿ ಸಂಘಟನೆ. ಇದನ್ನು ಯಾಕೆ ನಿಷೇಧ ಮಾಡುತ್ತಾರೆ ಎಂದರು.
ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.