Home Advertisement
Home ಆರೋಗ್ಯ ನೀವು ತುಬಾ ಸಣ್ಣಗಿದ್ದೀರಾ?: ನೈಸರ್ಗಿಕವಾಗಿ ತೂಕ ಹೆಚ್ಚಿಸಲು ಈ ‘ಸೂಪರ್ ಹಣ್ಣುಗಳುʼ!

ನೀವು ತುಬಾ ಸಣ್ಣಗಿದ್ದೀರಾ?: ನೈಸರ್ಗಿಕವಾಗಿ ತೂಕ ಹೆಚ್ಚಿಸಲು ಈ ‘ಸೂಪರ್ ಹಣ್ಣುಗಳುʼ!

0
149

ಈಗಿನ ದಿನದಲ್ಲಿ ತೂಕ ಇಳಿಸುವುದು ಎಷ್ಟು ದೊಡ್ಡ ಸವಾಲೋ, ಅತಿಯಾದ ಸಪೂರ ಮೈಕಟ್ಟು ಇರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಸವಾಲಾಗಿದೆ. ತೂಕ ಹೆಚ್ಚಿಸಿಕೊಳ್ಳುವುದು ಎಂದರೆ ಕೇವಲ ಹೊಟ್ಟೆಯ ಬೊಜ್ಜು ಬೆಳೆಸಿಕೊಳ್ಳುವುದಲ್ಲ.

ಬದಲಾಗಿ ದೇಹದಲ್ಲಿ ಸದೃಢವಾದ ಸ್ನಾಯುಗಳನ್ನು (Muscles) ವೃದ್ಧಿಸಿಕೊಳ್ಳುವುದು. ಎಣ್ಣೆ ಪದಾರ್ಥ ಅಥವಾ ಜಂಕ್ ಫುಡ್‌ಗಳ ಮೊರೆ ಹೋಗುವ ಬದಲು, ಪ್ರಕೃತಿದತ್ತವಾದ ಹಣ್ಣುಗಳ ಮೂಲಕ ತೂಕ ಏರಿಸಿಕೊಳ್ಳುವುದು ಅತ್ಯಂತ ಸುಗಮವಾದ ದಾರಿ.

ಹಾಗೇ ಕೆಲವು ಹಣ್ಣುಗಳನ್ನು ದೇಹ ಹೆಚ್ಚಿಸಿಕೊಳ್ಳಲು ಸೇವಿಸಿದರೆ, ಇನ್ನೂ ಕೆಲವು ಹಣ್ಣುಗಳನ್ನ ತೂಕ ಇಳಿಸಿಕೊಳಲ್ಲು ತಿನ್ನುತ್ತಾರೆ. ಅದೇ ರೀತಿಯಾಗಿ ಈ ಹಣ್ಣುಗಳನ್ನು ನಿಮ್ಮ ದಿನ ನಿತ್ಯದ ಡಯೆಟ್‌ಗೂ ಸಹ ಸೇರಿಸಿಕೊಳ್ಳಬಹುದು.

ಯಾವ ಹಣ್ಣುಗಳು ತೂಕ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತವೆ ಗೊತ್ತಾ?:

ಬಾಳೆಹಣ್ಣು (Banana): ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳು ಹೇರಳವಾಗಿರುತ್ತದೆ. ಅದಕ್ಕೆ ದಿನ 2 ರಿಂದ 3 ಬಾಳೆಹಣ್ಣು ತಿನ್ನುವುದು ಅಥವಾ ಹಾಲಿನೊಂದಿಗೆ ‘ಬನಾನಾ ಶೇಕ್’ ಮಾಡಿ ಕುಡಿಯುವುದು ವೇಗವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.

ಬೆಣ್ಣೆ ಹಣ್ಣು (Avocado): ಇದರಲ್ಲಿ ಹೃದಯಕ್ಕೆ ಪೂರಕವಾದ ಆರೋಗ್ಯಕರ ಕೊಬ್ಬು ಇದೆ. ಇದು ಅಧಿಕ ಕ್ಯಾಲರಿ ಹೊಂದಿದ್ದರೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

  • ಮುನ್ನಚ್ಚರಿಕೆ:
  • ಸಪೋಟ ಮತ್ತು ಹಲಸಿನ ಹಣ್ಣುಗಳು ಕೂಡ ಕ್ಯಾಲರಿ ಹೆಚ್ಚಿಸಲು ಮತ್ತು ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿವೆ. ಕೇವಲ ಆಹಾರ ಸೇವನೆಯಿಂದ ಕೊಬ್ಬು ಹೆಚ್ಚಬಹುದು. ಆದ್ದರಿಂದ ತಿಂದ ಆಹಾರವು ಸ್ನಾಯುವಾಗಿ ಬದಲಾಗಲು ಲಘು ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದು ಮುಖ್ಯ. ತಾಳ್ಮೆಯಿಂದ ನಿಯಮಿತವಾಗಿ ಈ ಆಹಾರ ಕ್ರಮ ಪಾಲಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಮಾವಿನ ಹಣ್ಣು (Mango): ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲರಿಗಳು ಹೆಚ್ಚಿರುವ ಮಾವಿನ ಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಒಣ ಹಣ್ಣುಗಳು (Dry Fruits): ಕೆಲವು ಡ್ರೈ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯವು. ಅಂಜೂರ, ಖರ್ಜೂರ, ಒಣ ದ್ರಾಕ್ಷಿಗಳು ತೂಕ ಹೆಚ್ಚಿಸಲು ಅತ್ಯುತ್ತಮ ಆಯ್ಕೆಗಳು. ಇವು ಕೆಟ್ಟ ಕೊಬ್ಬನ್ನು ದೂರವಿಟ್ಟು ಆರೋಗ್ಯಕರ ತೂಕ ನೀಡುತ್ತವೆ. ರಾತ್ರಿ ನೆನೆಸಿಟ್ಟ ಅಂಜೂರ ಮತ್ತು ಖರ್ಜೂರವನ್ನು ಬೆಳಗ್ಗೆ ತಿನ್ನುವುದು ತುಂಬಾ ಪರಿಣಾಮಕಾರಿ.

ಜೀರ್ಣಶಕ್ತಿ ವರ್ಧಕಗಳು: ತಿಂದ ಆಹಾರ ಮೈಗೆ ಹತ್ತಲು ಜೀರ್ಣಕ್ರಿಯೆ ಚೆನ್ನಾಗಿರಬೇಕು. ಇದಕ್ಕಾಗಿ ನಾರಿನಂಶ ಹೆಚ್ಚಿರುವ ಪೇರಲೆ (ಸೀಬೆಹಣ್ಣು) ಹಣ್ಣನ್ನು ಸೇವಿಸಬಹುದು.