SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ 13: ಗಗನ್‌ ‘ರಿವೆಂಜ್‌’ ಗೇಮ್‌ಗೆ ಧನುಷ್‌ ಬಲಿ; ಬಿಗ್ ಮನೆ ಪ್ರವೇಶಕ್ಕೆ ಬಿತ್ತು...

ಬಿಗ್‌ ಬಾಸ್‌ 13: ಗಗನ್‌ ‘ರಿವೆಂಜ್‌’ ಗೇಮ್‌ಗೆ ಧನುಷ್‌ ಬಲಿ; ಬಿಗ್ ಮನೆ ಪ್ರವೇಶಕ್ಕೆ ಬಿತ್ತು ಶಾಶ್ವತ ಕಲ್ಲು!

0
14

BBK13: ಬಿಗ್‌ ಬಾಸ್‌ ಸೀಸನ್ 13ರ ‘ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ನೀಡಲಾಗಿತ್ತು. ಅದುವೇ ಮಾಡಿದುನ್ನೋ ಮಾರಾಯ’, ಈ ಟಾಸ್ಕ್‌ನಲ್ಲಿ ಫ್ಲೈಟ್ ಪ್ರಯಾಣಿಕರ ತಂಡ ಗೆದ್ದು ಬೀಗಿತ್ತು. ಸೋತ ಬಿಗ್‌ ಬಾಸ್‌ ಮನೆ ಸದಸ್ಯರ ತಂಡದಲ್ಲಿದ್ದ ಓಂ ಪ್ರಕಾಶ್ ರಾವ್ ಫ್ಲೈಟ್ ಸೇರಿದರೆ, ಮಾಡ್ರನ್ ಮಹಾಕವಿ ಮಂಜು ಮೊದಲ ಬಾರಿಗೆ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದರು. ಆದರೆ, ಎರಡನೇ ಜ್ಞಾನದ ಸವಾಲಿನ ಟಾಸ್ಕ್‌ನಲ್ಲಿ ಫ್ಲೈಟ್ ಪ್ರಯಾಣಿಕರು ಸೊನ್ನೆ ಸುತ್ತಿ ಸೋಲನುಭವಿಸಿದರು. ಬಿಗ್‌ ಬಾಸ್‌ ಮನೆ ಸದಸ್ಯರು ಎರಡು ಅಂಕಗಳಿಂದ ಗೆದ್ದು ಬೀಗಿದರು.

ಹಾಗೇ ಗೆದ್ದ ತಂಡಕ್ಕೆ ಸಿಕ್ಕ ವಿಶೇಷ ಅಡ್ವಾಂಟೇಜ್ ಪ್ರಕಾರ, ಸೋತ ತಂಡದ ಒಬ್ಬ ಸದಸ್ಯರನ್ನು ಇನ್ನು ಎಂದಿಗೂ ಬಿಗ್‌ ಬಾಸ್ ಮನೆ ಪ್ರವೇಶಿಸದಂತೆ ತಡೆಯಬೇಕಿತ್ತು. ಈ ನಿರ್ಧಾರಕ್ಕೆ ತಂಡದಲ್ಲಿ ಒಮ್ಮತ ಮೂಡದಿದ್ದಾಗ, ಬಿಗ್‌ ಬಾಸ್ ವಿಐಪಿ ಗಗನ್ ಚಿನ್ನಪ್ಪ ಈ ಅಧಿಕಾರ ನೀಡಿದರು. ಗಗನ್ ತಮ್ಮ ಸ್ವಂತ ನಿರ್ಧಾರ ಬಳಸಿ, ಧನುಷ್ ಇನ್ಮುಂದೆ ಯಾವುದೇ ಟಾಸ್ಕ್ ಗೆದ್ದರೂ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸದಂತೆ ಶಾಶ್ವತವಾಗಿ ತಡೆದರು. ಹಾಗೆಯೇ ಜಗ್ಗಮಮ್ಮಿಗೆ ಫ್ಲೈಟ್ ಹತ್ತದಂತೆ ಅಡ್ವಾಂಟೇಜ್ ನೀಡಿದರು.

ಈ ಹಠಾತ್ ನಿರ್ಧಾರದಿಂದ ರೋಚ್ಚಿಗೆದ್ದ ಧನುಷ್, ಇದು ಗಗನ್ ತೆಗೆದುಕೊಂಡ ‘ವೈಯಕ್ತಿಕ ಪ್ರತಿಕಾರ’ ಎಂದು ವಾದಿಸಿ ಆಕ್ರೋಶ ಹೊರಹಾಕಿದರು. ಅಲ್ಲದೇ.. ಧನುಷ್‌ ಇದು ಟಾರ್ಗೆಟ್‌ ಮಾಡಿ ಇಂತಹ ನಿರ್ಧಾರ ತಿಳಿಸಿದ್ದಿರಿ ಎಂಬ ಆರೋಪ ಮಾಡುತ್ತಾರೆ.

ಟಾಸ್ಕ್‌ಗೂ ಮುನ್ನ ಉಸ್ತುವಾರಿ ಗಗನ್, ಧನುಷ್‌ಗೆ “ಕುಳಿತುಕೊಳ್ಳಿ” ಎಂದಾಗ, ಧನುಷ್ “ಅದನ್ನೇ ಮಾಡ್ತಿದ್ದೀನಿ ಬ್ರೋ” ಎಂದಿದ್ದರು. ಇದಕ್ಕೆ ಕೆರಳಿದ ಗಗನ್, “ನನಗೆ ಬ್ರೋ ಅನ್ನಬೇಡಿ, ನಿಮ್ಮ ವಯಸ್ಸೇನು? ‘ಗಗನ್ ಅವರೇ’ ಎಂದು ಕರೆಯಿರಿ. ದುರಹಂಕಾರದ ಮಾತುಗಳು ಬೇಡ” ಎಂದು ಎಚ್ಚರಿಸಿದ್ದರು. ಇಬ್ಬರ ನಡುವೆ ನಡೆದ ಈ ಮಾತಿನ ಚಕಮಕಿಯೇ ಕೊನೆಗೆ ಆಟದ ಫಲಿತಾಂಶದ ಮೇಲೆ ಪರಿಣಾಮ ಬೀರಿ, ಧನುಷ್‌ಗೆ ಬಿಗ್ ಮನೆ ಪ್ರವೇಶಕ್ಕೆ ಶಾಶ್ವತವಾಗಿ ಕಲ್ಲುಹಾಕಿತು.