SK Home Ad
Home ಸಿನಿ ಮಿಲ್ಸ್ ಕಿಚ್ಚ ಸುದೀಪ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಾಂಡವ್ ರಾಮ್; ಗೆಳೆಯ ಗಗನ್ ಆಡಿದ್ದ ಆ...

ಕಿಚ್ಚ ಸುದೀಪ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಾಂಡವ್ ರಾಮ್; ಗೆಳೆಯ ಗಗನ್ ಆಡಿದ್ದ ಆ ಕಠಿಣ ಮಾತು ಇನ್ನೂ ಕಾಡುತ್ತಿದೆ!

0
40

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟವು 13ನೇ ವಾರಕ್ಕೆ ಕಾಲಿಡುತ್ತಿದ್ದು, ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗಿನ ಭಾವನಾತ್ಮಕ ಕ್ಷಣಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಇತ್ತೀಚಿನ ಸೂಪರ್ ಸಂಡೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ನೀಡಿದ ವಿಶೇಷ ಚಟುವಟಿಕೆಯ ವೇಳೆ, ಗಟ್ಟಿ ಗುಂಡಿಗೆಯ ಸ್ಪರ್ಧಿ ತಾಂಡವ್ ರಾಮ್ ತಮ್ಮ ಆತ್ಮೀಯ ಗೆಳೆಯ ಗಗನ್ ಚಿನ್ನಪ್ಪ ಆಡಿದ ಹಳೆಯ ಮಾತುಗಳನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. “ನಿಮ್ಮ ಮುಂದೆ ನಿಂತು ಸುಳ್ಳು ಹೇಳಲು ಸಾಧ್ಯವಿಲ್ಲ” ಎಂದು ಸುದೀಪ್ ಎದುರು ತಾಂಡವ್ ತಮ್ಮ ಮನದ ನೋವನ್ನು ತೆರೆದಿಟ್ಟಿದ್ದಾರೆ.

ಈ ಹಿಂದೆ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಒಂದರಲ್ಲಿ ಗಗನ್ ಚಿನ್ನಪ್ಪ ಅವರು ಕಿರಣ್ ಶಾಸ್ತ್ರಿ ಪರವಾಗಿ ಹಾಗೂ ತಾಂಡವ್ ರಾಮ್ ಅವರು ಜಗದೀಶ್ ಪರವಾಗಿ ಆಡುತ್ತಿದ್ದರು. ಸ್ವಿಮ್ಮಿಂಗ್ ಪೂಲ್‌ನಿಂದ ಬಾಲ್‌ಗಳನ್ನು ತಂದು ರಕ್ಷಿಸುವ ರೋಚಕ ಹಣಾಹಣಿಯ ವೇಳೆ, ಗಗನ್‌ಗೆ ಸಹಾಯ ಮಾಡಲು ಹೋದ ತಾಂಡವ್ ಕೈಯಿಂದ ಪ್ರಶಾಂತ್ ಆಕಸ್ಮಿಕವಾಗಿ ಬಾಲ್ ಕಿತ್ತುಕೊಂಡಿದ್ದರು. ಆಟದ ಕಾವಿನಲ್ಲಿದ್ದ ಗಗನ್, ಗೆಳೆತನವನ್ನೂ ಬದಿಗಿಟ್ಟು ತಾಂಡವ್ ವಿರುದ್ಧ ಏಕವಚನದಲ್ಲಿ “ಕುನ್ನಿ”, “ಥೂ ಹೋಗೋಲೇ” ಎಂದು ತೀವ್ರವಾಗಿ ಮೂದಲಿಸಿದ್ದರು.

ಆ ಟಾಸ್ಕ್ ನಡೆದು ಎರಡು ವಾರಗಳೇ ಕಳೆದಿದ್ದರೂ, ಆಪ್ತ ಗೆಳೆಯ ಬಳಸಿದ ಆ ಅವಹೇಳನಕಾರಿ ಪದಗಳು ತಾಂಡವ್ ಅವರ ಎದೆಯಲ್ಲಿ ಇಂದಿಗೂ ನೋವುಂಟು ಮಾಡುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಬಲಿಷ್ಠ ಸ್ಪರ್ಧಿಗಳ ಸ್ನೇಹ ಕೊನೆಯವರೆಗೂ ಉಳಿಯುವುದು ಅಪರೂಪವಾದರೂ, ತಾಂಡವ್ ಮತ್ತು ಗಗನ್ ಬಾಂಧವ್ಯ ಮೆಚ್ಚುಗೆ ಗಳಿಸಿತ್ತು. ಇದೀಗ ಸುದೀಪ್ ಮುಂದೆ ತಾಂಡವ್ ಕಣ್ಣೀರಿಟ್ಟಿರುವುದು ಮನೆಯೊಳಗೆ ಭಾವುಕ ವಾತಾವರಣ ಸೃಷ್ಟಿಸಿದೆ.