SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಕ್ಯಾಪ್ಟನ್ಸಿಗಾಗಿ ಗಗನ್ ಟ್ಯಾಟೋ ರಹಸ್ಯ ಬಯಲು ಮಾಡಿದ ಗಾನವಿ; ಕೆಂಡಾಮಂಡಲವಾದ ಚಿನ್ನಪ್ಪ!

ಬಿಗ್ ಬಾಸ್ 13: ಕ್ಯಾಪ್ಟನ್ಸಿಗಾಗಿ ಗಗನ್ ಟ್ಯಾಟೋ ರಹಸ್ಯ ಬಯಲು ಮಾಡಿದ ಗಾನವಿ; ಕೆಂಡಾಮಂಡಲವಾದ ಚಿನ್ನಪ್ಪ!

0
9

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ವಾರದಿಂದ ವಾರಕ್ಕೆ ಆಟದ ರಂಗು ಬದಲಾಗುತ್ತಿದ್ದು, ಸ್ಪರ್ಧಿಗಳ ನಡುವೆ ಬಿರುಕು ಮೂಡಿಸುವಂತಹ ಹೊಸ ಟಾಸ್ಕ್ ನೀಡಲಾಗಿದೆ. ಈ ಬಾರಿ ಮನೆಗೆ ‘ಟೇಪ್ ರೆಕಾರ್ಡರ್’ ರೂಪದಲ್ಲಿ ವಿಶೇಷ ಅತಿಥಿಯ ಆಗಮನವಾಗಿದ್ದು, ಇದುವರೆಗೂ ಯಾರ ಬಳಿಯೂ ಹೇಳಿಕೊಳ್ಳದ ವೈಯಕ್ತಿಕ ರಹಸ್ಯಗಳನ್ನು ಬಿಚ್ಚಿಡುವಂತೆ ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಗಗನ್ ಚಿನ್ನಪ್ಪ, ಕಿರಣ್ ಶಾಸ್ತ್ರಿ, ಜಗದೀಶ್, ಆಸಿಯಾ ಫಿರ್ದೋಸ್,ಯಶಸ್‌, ಸೌಂದರ್ಯ, ಸೇರಿದಂತೆ ಎಲ್ಲಾ ಸ್ಪರ್ಧಿಗಳು ಆಕ್ಟಿವಿಟಿ ರೂಮ್‌ನಲ್ಲಿ ತಮ್ಮ ಮನಸ್ಸಿನ ರಹಸ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ.

ಈ ರಹಸ್ಯ ಪ್ರಕ್ರಿಯೆಗೆ ಬಿಗ್ ಬಾಸ್ ಕ್ಯಾಪ್ಟನ್ಸಿ ಟ್ವಿಸ್ಟ್ ನೀಡಿದ್ದಾರೆ. ನೇರವಾಗಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಲು ಆಸಿಯಾ ಫಿರ್ದೋಸ್ ಮತ್ತು ಗಾನವಿ ಗೌಡ ಅವರಿಗೆ ಅವಕಾಶ ನೀಡಲಾಗಿದ್ದು, ಬಜರ್ ಒತ್ತಿ ಒಬ್ಬ ಸ್ಪರ್ಧಿಯ ರಹಸ್ಯವನ್ನು ಇಡೀ ಮನೆಯ ಮುಂದೆ ಬಹಿರಂಗಪಡಿಸುವ ಷರತ್ತು ವಿಧಿಸಲಾಗಿತ್ತು. ತಕ್ಷಣವೇ ಬಜರ್ ಒತ್ತಿದ ಗಾನವಿ ಗೌಡ, ಗಗನ್ ಚಿನ್ನಪ್ಪ ಅವರ ಸೀಕ್ರೆಟ್ ತಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಗಗನ್ ತಮ್ಮ ಕೈ ಮೇಲಿರುವ ಟ್ಯಾಟೋ ಕುರಿತು ರೆಕಾರ್ಡ್ ಮಾಡಿದ್ದ ರಹಸ್ಯ ಇಡೀ ಮನೆಗೆ ಕೇಳಿಸಿದ್ದು, ಗಾನವಿ ನೇರವಾಗಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದಾರೆ.

ಗಾನವಿ ಅವರನ್ನು ಮನೆಯ ಮಹಾರಾಣಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದ ಗಗನ್ ಚಿನ್ನಪ್ಪ, ಈಗ ತಮ್ಮದೇ ರಹಸ್ಯ ಬಯಲು ಮಾಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದಾರೆ. “ಇನ್ಮೇಲಿಂದ ಎಲ್ಲಿ ಇಡಬೇಕು ಅಲ್ಲಿಯೇ ಇಡುತ್ತೇನೆ, ಗೇಮ್ ಇವಾಗ ಸ್ಟಾರ್ಟ್” ಎಂದು ಗಾನವಿಗೆ ನೇರವಾಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಘಟನೆಯಿಂದ ಇಬ್ಬರ ನಡುವಿನ ಬಾಂಧವ್ಯ ಹಳಸಿದ್ದು, ಮುಂದಿನ ಸಂಚಿಕೆಗಳು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿವೆ.