SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ತತ್ಕೋಳ ಅರಣ್ಯದತ್ತ ತೆರಳದೆ ವಾಪಸ್ ಬೇಲೂರಿನತ್ತ ಮುಖ ಮಾಡಿದ 22 ಕಾಡಾನೆಗಳು

ತತ್ಕೋಳ ಅರಣ್ಯದತ್ತ ತೆರಳದೆ ವಾಪಸ್ ಬೇಲೂರಿನತ್ತ ಮುಖ ಮಾಡಿದ 22 ಕಾಡಾನೆಗಳು

0
36
ಅರಣ್ಯದತ್ತ ಸಾಗದೆ ದಿಕ್ಕು ಬದಲಿಸಿದ ಕಾಡಾನೆಗಳು; ಆಪರೇಷನ್ ಗಜಕ್ಕೆ ಹೊಸ ಸವಾಲು

ಆಪರೇಷನ್ ಗಜಕ್ಕೆ ಕಾಡಾನೆಗಳ ತಿರುಗೇಟು; ತತ್ಕೋಳ ಅರಣ್ಯಕ್ಕೆ ತೆರಳದೆ ಬೇಲೂರು ಕಡೆಗೆ ಹಿಂಡು ವಾಪಸ್

ಮೂಡಿಗೆರೆ: ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಯ ನಡುವೆ ಕಾಡಾನೆಗಳ ಹಿಂಡು ತತ್ಕೋಳ ಅರಣ್ಯದತ್ತ ತೆರಳದೆ ಬಂದ ದಾರಿಯಲ್ಲೇ ವಾಪಸ್ ಸಾಗುತ್ತಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದ ಭಾಗದಿಂದ ಚಲಿಸುತ್ತಿದ್ದ ಬೀಟಮ್ಮ, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಹೆಸರಿನ ಕಾಡಾನೆಗಳ ಹಿಂಡು ಇದೀಗ ಮತ್ತೆ ಬೇಲೂರು ಭಾಗದತ್ತ ಮುಖ ಮಾಡಿದೆ.

ನಿನ್ನೆ ತತ್ಕೋಳ ಅರಣ್ಯದಿಂದ ಕೇವಲ 3.5 ಕಿ.ಮೀ. ದೂರದಲ್ಲಿದ್ದ ಸುಮಾರು 22 ಕಾಡಾನೆಗಳ ಹಿಂಡು, ಅರಣ್ಯದೊಳಗೆ ತೆರಳುವ ಬದಲು ದಿಕ್ಕು ಬದಲಿಸಿ ಸುಮಾರು 10 ಕಿ.ಮೀ. ದೂರಕ್ಕೆ ಹಿಂದಕ್ಕೆ ಸಾಗಿವೆ.

ಸದ್ಯ ಈ ಕಾಡಾನೆಗಳ ಹಿಂಡು ಮೂಡಿಗೆರೆ ತಾಲೂಕಿನ ಕಾರ್ ಬೈಲು ಗ್ರಾಮದ ದುಂಡಿಗ ಭಾಗದಲ್ಲಿ ಬೀಡುಬಿಟ್ಟಿದೆ ಎಂದು ತಿಳಿದುಬಂದಿದೆ.

ಕಾಡಾನೆಗಳನ್ನು ತತ್ಕೋಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯದತ್ತ ಸ್ಥಳಾಂತರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ಆನೆಗಳ ಹಿಂಡು ಮತ್ತೆ ಹಿಂದಿನ ಮಾರ್ಗದಲ್ಲೇ ಸಾಗುತ್ತಿರುವುದು ಕಾರ್ಯಾಚರಣೆಗೆ ಸವಾಲಾಗಿದೆ.

ಆನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಮುಂದಿನ ಕಾರ್ಯಾಚರಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.