SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: 5 ಸ್ಪರ್ಧಿಗಳು ನಾಮಿನೇಟ್; ಯಶಸ್‌ಗೆ ಸಿಕ್ಕಿತು ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್!

ಬಿಗ್ ಬಾಸ್ 13: 5 ಸ್ಪರ್ಧಿಗಳು ನಾಮಿನೇಟ್; ಯಶಸ್‌ಗೆ ಸಿಕ್ಕಿತು ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್!

0
15

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ 79 ದಿನಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಫಿನಾಲೆ ಸಮೀಪಿಸುತ್ತಿರುವಂತೆಯೇ ಸ್ಪರ್ಧಿಗಳ ನಡುವಿನ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಸದ್ಯ ಮನೆಯಲ್ಲಿ 10 ಸ್ಪರ್ಧಿಗಳಿದ್ದು, ಟಾಪ್ 5 ಸ್ಥಾನಕ್ಕೇರಲು ಭಾರಿ ಕಸರತ್ತು ನಡೆಯುತ್ತಿದೆ. ಈ ವಾರ ನಾಮಿನೇಷನ್‌ನಿಂದ ಬಚಾವಾಗಲು ಸ್ಪರ್ಧಿಗಳು ನಾನಾ ತಂತ್ರಗಳನ್ನು ಹೆಣೆದರೂ ಅಂತಿಮವಾಗಿ ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್ ಮತ್ತು ಯಶಸ್ ಸೇರಿ ಐದು ಮಂದಿ ನಾಮಿನೇಟ್ ಆಗಿದ್ದಾರೆ.

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಧನುಷ್ ಅವರ ‘ಜೋಕರ್ ಕಾರ್ಡ್’ ಅಧಿಕಾರ ಮಹತ್ವದ ಪಾತ್ರ ವಹಿಸಿದೆ. ಅದಕ್ಕೂ ಮುನ್ನ ಗಗನ್ ಚಿನ್ನಪ್ಪ ಅವರಿಂದ ಯಶಸ್ ನೇರವಾಗಿ ನಾಮಿನೇಟ್ ಆಗಿದ್ದರೆ, ಜಗದೀಶ್ ಅವರನ್ನು ಮನವೊಲಿಸಿ ಸೇಫ್ ಆಗಲು ಸೌಂದರ್ಯಾ ನಡೆಸಿದ ಪ್ರಯತ್ನ ವಿಫಲವಾಗಿದೆ. ಮುಂದಿನ ಎಲ್ಲ ವಾರಗಳಿಗೂ ನಾಮಿನೇಟ್ ಆಗಿರುವ ಯಶಸ್ ಮೇಲೆ ತೀವ್ರ ಒತ್ತಡವಿದ್ದು, ಸೌಂದರ್ಯಾ ಜೊತೆಗಿನ ಆಪ್ತ ಸ್ನೇಹವನ್ನು ಬದಿಗಿಟ್ಟು ಆಟವಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮತ್ತೊಂದೆಡೆ, ಮನೆಯೊಳಗೆ ಮತ್ತಷ್ಟು ರೋಚಕತೆ ತುಂಬಲು ಬಿಗ್ ಬಾಸ್ ಯಶಸ್ ಅವರಿಗೆ ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ತಂಡದೊಳಗೆ ಇದ್ದುಕೊಂಡೇ ಆಟವನ್ನು ಕೆಡಿಸುವ ಗೌಪ್ಯ ಜವಾಬ್ದಾರಿ ಅವರ ಮೇಲಿದ್ದು, ಇದನ್ನು ಯಶಸ್ವಿಯಾಗಿ ನಿಭಾಯಿಸಿದರೆ ವಿಶೇಷ ಅಧಿಕಾರ ಸಿಗಲಿದೆ. ಈ ಹೊಸ ಸವಾಲಿನಿಂದ ಯಶಸ್ ಫುಲ್ ಎಕ್ಸೈಟ್ ಆಗಿದ್ದು, ಮುಂದಿನ ಸಂಚಿಕೆಗಳು ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿವೆ.