SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆ ತೊರೆಯಲು ಸಜ್ಜಾದ ಅವಿನಾಶ್: ಮಂಜನ ಅತಿರೇಕದ ವರ್ತನೆಗೆ ಬೇಸತ್ತು ಸೂಟ್‌ಕೇಸ್ ಪ್ಯಾಕ್!

ಬಿಗ್ ಬಾಸ್ ಮನೆ ತೊರೆಯಲು ಸಜ್ಜಾದ ಅವಿನಾಶ್: ಮಂಜನ ಅತಿರೇಕದ ವರ್ತನೆಗೆ ಬೇಸತ್ತು ಸೂಟ್‌ಕೇಸ್ ಪ್ಯಾಕ್!

0
21

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಹದ್ದು ಮೀರಿದ ಸ್ಪರ್ಧಿಗಳ ವರ್ತನೆ ಹಾಗೂ ಮಂಜನ ಅತಿರೇಕದ ನಡವಳಿಕೆಯಿಂದಾಗಿ ಇಡೀ ಮನೆಯ ಶಾಂತಿಭಂಗವಾಗಿದೆ. ಮಧ್ಯರಾತ್ರಿ ಅಡುಗೆ ಮನೆಗೆ ನುಗ್ಗಿ ಬೇರೆಯವರ ಪಾಲಿನ ಮೊಟ್ಟೆ ಸೇರಿದಂತೆ ಆಹಾರ ಧಾನ್ಯಗಳನ್ನು ದುರ್ಬಳಕೆ ಮಾಡಿಕೊಂಡ ಲಿಖಿತ್, ಧನುಷ್ ಹಾಗೂ ಮಂಜನ ಕೃತ್ಯ ಇಡೀ ಮನೆಗೆ ಕಿರಿಕಿರಿ ಉಂಟುಮಾಡಿದೆ. ಈ ಕೀಳುಮಟ್ಟದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸ್ಪರ್ಧಿ ಅವಿನಾಶ್, ದೊಡ್ಮನೆಯಿಂದ ಸ್ವಯಂಪ್ರೇರಿತರಾಗಿ ಹೊರನಡೆಯಲು ನಿರ್ಧರಿಸಿದ್ದಾರೆ.

ಸೆಪ್ಟೆಂಬರ್ 17ರ ಸಂಚಿಕೆಯಲ್ಲಿ ನಡೆದ ಈ ಘಟನೆಯಿಂದ ರೊಚ್ಚಿಗೆದ್ದ ಅವಿನಾಶ್, ತಮ್ಮ ಸೂಟ್‌ಕೇಸ್ ಪ್ಯಾಕ್ ಮಾಡಿಕೊಂಡು ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ನಿಲ್ಲಿಸಲು ಸಿದ್ಧರಾಗಿದ್ದಾರೆ. “ಇಂತಹ ವ್ಯಕ್ತಿಗಳ ಜೊತೆ ಒಂದೇ ಸೂರಿನಡಿ ಇರಲು ಸಾಧ್ಯವಿಲ್ಲ” ಎಂದು ಪಟ್ಟು ಹಿಡಿದ ಅವರು, ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆಯುವಂತೆ ಕ್ಯಾಮೆರಾ ಎದುರು ಮನವಿ ಮಾಡಿದ್ದಾರೆ.

ಈ ವೇಳೆ ಅವರನ್ನು ಇನ್ನಷ್ಟು ಕೆಣಕಲು ಯತ್ನಿಸಿದ ಮಂಜನಿಗೆ, “ಕೋಪ ಜಾಸ್ತಿಯಾದರೆ ಕೈ ಮಾಡುವುದಕ್ಕೂ ಹಿಂಜರಿಯುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬಿಗ್ ಬಾಸ್ ಅವಿನಾಶ್ ಅವರನ್ನು ಕನ್ಫೆಷನ್ ರೂಮ್‌ಗೆ ಕರೆಸಿಕೊಂಡಿದ್ದು, ಅವಿನಾಶ ಮುಂದಿನ ನಡೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.