SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಕನ್ನಡ 13: ನೆಟ್ಟಿಗರ ಕಣ್ಣಿಗೆ ಬಿದ್ದ ಆಸಿಯಾ ಗೇಮ್ ಪ್ಲಾನ್, ಸೌಂದರ್ಯ ಫ್ಯಾನ್ಸ್...

ಬಿಗ್ ಬಾಸ್ ಕನ್ನಡ 13: ನೆಟ್ಟಿಗರ ಕಣ್ಣಿಗೆ ಬಿದ್ದ ಆಸಿಯಾ ಗೇಮ್ ಪ್ಲಾನ್, ಸೌಂದರ್ಯ ಫ್ಯಾನ್ಸ್ ಜೊತೆ ಟ್ರೋಲ್ ವಾರ್!

0
65

‘ಬಿಗ್ ಬಾಸ್ ಕನ್ನಡ 13’ ಅಂಗಳದಲ್ಲಿ ಸ್ಪರ್ಧಿಗಳ ನಡುವಿನ ಜಗಳ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್‌ಗೆ ಕಾರಣವಾಗಿದೆ. ಮನೆಗೆ ಕಾಲಿಟ್ಟ ಆರಂಭದಲ್ಲೇ ಸಣ್ಣಪುಟ್ಟ ವಿಷಯಗಳಿಗೆ ಕಣ್ಣೀರಿಟ್ಟು, ಆಟದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಅತ್ತಿದ್ದ ಸ್ಪರ್ಧಿ ಆಸಿಯಾ ಫಿರ್ದೋಸ್ ಅವರನ್ನು ನೆಟ್ಟಿಗರು ‘ಅಳುಮುಂಜಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಟಾಸ್ಕ್ ಒಂದರ ವೇಳೆ ಸೌಂದರ್ಯ ಶೆಟ್ಟಿ ಹಾಗೂ ಮಂಜ ನಡುವೆ ದೈಹಿಕ ಮತ್ತು ಮಾನಸಿಕ ಗಲಾಟೆ ನಡೆದಾಗ, ಮಂಜ ಅವರ ಬಳಿ ತೆರಳಿ “ಅಷ್ಟಾದರೂ ಕೈ ಎತ್ತಲಿಲ್ಲ, ನೀವು ಗ್ರೇಟ್” ಎಂದು ಆಸಿಯಾ ಹೇಳಿದ್ದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಆಸಿಯಾ ಅವರು ಯಾರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಗೊಂದಲ ಮೂಡಿದ್ದು, ಕೇವಲ ಕಾಮನರ್ಸ್ ಗಷ್ಟೇ ಆದ್ಯತೆ ನೀಡುತ್ತಾ ಸೆಲೆಬ್ರಿಟಿಗಳನ್ನು ಶರವೇಗದಲ್ಲಿ ನಾಮಿನೇಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನೊಂದೆಡೆ, “ಬಿಸಿ ಅನ್ನ ಸಿಕ್ಕಿಲ್ಲ” ಎಂಬ ಕ್ಷುಲ್ಲಕ ಕಾರಣಕ್ಕೆ ಆಸಿಯಾ ಅತ್ತಿದ್ದನ್ನು ಸೌಂದರ್ಯ ಶೆಟ್ಟಿ ಅಣಕಿಸಿದ್ದರು. ಆದರೆ, ಮಂಜ ಅವರು ಸೌಂದರ್ಯ ಅವರ ಬಗ್ಗೆ ‘ಕ್ಯಾರೆಕ್ಟರ್‌ಲೆಸ್’ ಎಂದು ಕೀಳಾಗಿ ಮಾತನಾಡಿದಾಗ ಕಣ್ಣೀರಿಟ್ಟಿದ್ದ ಸೌಂದರ್ಯ ಅವರನ್ನೂ ಆಸಿಯಾ ಫ್ಯಾನ್ಸ್ ಲೇವಡಿ ಮಾಡಿದ್ದಾರೆ. ಆದ್ರೆ “ಬಿಸಿ ಅನ್ನಕ್ಕಾಗಿ ಅಳುವುದಕ್ಕೂ, ಚಾರಿತ್ರ್ಯವಧೆಯಾದಾಗ ಕಣ್ಣೀರಿಡುವುದಕ್ಕೂ ವ್ಯತ್ಯಾಸವಿದೆ” ಎಂದು ಸೌಂದರ್ಯ ಬೆಂಬಲಿಗರು ತಿರುಗೇಟು ನೀಡಿದ್ದಾರೆ.

ಅಲ್ಲದೆ, ಗಗನ್ ಅವರನ್ನು ನಾಮಿನೇಟ್ ಮಾಡಲು ಆಸಿಯಾ ನೀಡಿದ ಕಾರಣ ಹಾಗೂ ಮಂಜ ಅವರ ವರ್ತನೆಯನ್ನು ಖಂಡಿಸದೆ ಫ್ರೆಂಡ್ಲಿಯಾಗಿ ಬುದ್ಧಿ ಹೇಳಿದ್ದು ವೀಕ್ಷಕರಿಗೆ ಸರಿಬಂದಿಲ್ಲ. ಒಟ್ಟಿನಲ್ಲಿ, ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆಸಿಯಾ ಅವರ ಹೇಳಿಕೆಗಳು ಮತ್ತು ಕ್ಯಾಲ್ಕ್ಯುಲೇಟಿವ್ ನಡೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.