SK Home Ad
Home ನಮ್ಮ ಜಿಲ್ಲೆ ಉಡುಪಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ತಮಿಳುನಾಡು CM ವಿಜಯ್

ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ತಮಿಳುನಾಡು CM ವಿಜಯ್

0
49

ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ತಮಿಳುನಾಡು ಸಿಎಂ ಜೋಸೆಫ್ ವಿಜಯ್; 1.6 ಕೆಜಿ ಬೆಳ್ಳಿಯ ಖಡ್ಗ ಸಮರ್ಪಣೆ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕೊಲ್ಲೂರಿಗೆ ಆಗಮಿಸಿದ ವಿಜಯ್ ಅವರ ಭೇಟಿಯು ಭಕ್ತರು ಮತ್ತು ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿತು.

ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ ಬೆಳೆಸಿದರು. ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕೊಲ್ಲೂರಿಗೆ ತಲುಪಿದ ಅವರು ಮೊದಲು ಪ್ರವಾಸಿ ಮಂದಿರಕ್ಕೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ:  ‘ಪ್ರಚೋದನಕಾರಿ’ ಭಾಷಣ : ಮಾಜಿ ಮುಖ್ಯಮಂತ್ರಿ ವಿರುದ್ಧ 2ನೇ FIR

ದೇವಾಲಯಕ್ಕೆ ಆಗಮಿಸಿದ ವೇಳೆ ಆಕರ್ಷಕ ಕೆಂಪು ಶಲ್ಯ ಧರಿಸಿದ್ದ ವಿಜಯ್ ಅವರನ್ನು ದೇವಸ್ಥಾನದ ಅರ್ಚಕರು ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ದೇವಾಲಯ ಪ್ರವೇಶಿಸುವ ವೇಳೆ ವಿಜಯ್ ಅವರು ಕೈಮುಗಿದು ಭಕ್ತರಿಗೆ ನಮಸ್ಕರಿಸಿದ್ದು, ಈ ವೇಳೆ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಘಾರ ಕೂಗಿ ಸ್ವಾಗತಿಸಿದರು.

ಶುಕ್ರವಾರದ ವಿಶೇಷ ದಿನವಾಗಿದ್ದರಿಂದ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಜಯ್ ಅವರು ಯಾವುದೇ ವಿಶೇಷ ಪೂಜೆ ಅಥವಾ ಹರಕೆ ಸಲ್ಲಿಸದೇ, ಕೇವಲ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಅರ್ಚಕ ಹಾಗೂ ಆಡಳಿತ ಸಮಿತಿ ಸದಸ್ಯ ನಿತ್ಯಾನಂದ ಅಡಿಗ ಅವರು ಸಂಕಲ್ಪ ಮಾಡಿಸಿ ವಿಜಯ್ ಅವರ ಕೈಗೆ ರಕ್ಷಾದಾರ ಕಟ್ಟಿದರು.

ಇದನ್ನೂ ಓದಿ:  ಭಾರತದ ಶೂಟಿಂಗ್ ಕ್ರಾಂತಿಗೆ ಮುನ್ನುಡಿ ಬರೆದ ಜಸ್ಪಾಲ್ ರಾಣಾ ಇನ್ನಿಲ್ಲ

ಮೂಕಾಂಬಿಕಾ ದೇವಿಗೆ 1.6 ಕೆಜಿ ಬೆಳ್ಳಿಯ ಖಡ್ಗ ಸಮರ್ಪಿಸಿದ ವಿಜಯ್: ಸುಮಾರು ಅರ್ಧ ಗಂಟೆ ಕಾಲ ದೇವಾಲಯದಲ್ಲಿ ಕಳೆದ ವಿಜಯ್ ಅವರು ದೇವಿಗೆ 1.600 ಕೆಜಿ ತೂಕದ ಬೆಳ್ಳಿಯ ಖಡ್ಗವನ್ನು ಸಮರ್ಪಿಸಿದರು. ಬಳಿಕ ದೇವಸ್ಥಾನದ ಆಡಳಿತ ಮಂಡಳಿಯವರು ಅವರನ್ನು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಸದಸ್ಯರಾದ ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ, ಅಭಿಲಾಷಾರಾಣಿ, ಹೆರಿಯ ದೇವಾಡಿಗ, ಮಾಜಿ ಶಾಸಕ ಗೋಪಾಲ ಪೂಜಾರಿ, ಆಡಳಿತಾಧಿಕಾರಿ ರವೀಂದ್ರ ಶೆಟ್ಟಿ, ತಂತ್ರಿ ರಾಮಚಂದ್ರ ಅಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ:  NEET ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷಾ ಅವಧಿ ಹೆಚ್ಚಳ

ಅಭಿಮಾನಿಗಳಿಂದ ಭಾರೀ ಸಂಭ್ರಮ : ಖ್ಯಾತ ನಟ ಮತ್ತು ರಾಜಕೀಯ ನಾಯಕನಾಗಿರುವ ವಿಜಯ್ ಅವರನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಕೊಲ್ಲೂರಿಗೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆಯಿಂದಲೇ ದೇವಾಲಯದ ಸುತ್ತಮುತ್ತ ಅಭಿಮಾನಿಗಳು ಜಮಾಯಿಸಿದ್ದು, ಕೆಲವರು ಮರಗಳು ಹಾಗೂ ಕಟ್ಟಡಗಳ ಮೇಲೇರಿ ವಿಜಯ್ ಅವರ ಆಗಮನಕ್ಕಾಗಿ ಕಾಯುತ್ತಿದ್ದರು.

ಮಳೆಯ ನಡುವೆಯೂ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಲಿಲ್ಲ. ಟಿವಿಕೆ ಪಕ್ಷದ ಬ್ಯಾನರ್‌ಗಳನ್ನು ಪ್ರದರ್ಶಿಸುತ್ತಾ, ಶಿಳ್ಳೆ ಹೊಡೆದು ಹಾಗೂ ಘೋಷಣೆಗಳನ್ನು ಕೂಗುತ್ತಾ ವಿಜಯ್ ಅವರಿಗೆ ಸ್ವಾಗತ ಕೋರಿದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಹರಸಾಹಸಪಡಬೇಕಾಯಿತು.

ಇದನ್ನೂ ಓದಿ:  ಮರಳಿನಲ್ಲಿ ಮೂಡಿದ ಭಾರತದ ಹೆಮ್ಮೆ: ಪರಿಸರ ಸಂದೇಶ ಹೊತ್ತ ಶಿಲ್ಪಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

ಐತಿಹಾಸಿಕ ಹಿನ್ನೆಲೆ : ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ. ಆದರೆ ಅವರ ಕುಟುಂಬ ಸದಸ್ಯರು ಈ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ ಹಾಗೂ ಜಯಲಲಿತಾ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರೆ, ಪ್ರಸ್ತುತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕುಟುಂಬ ಸದಸ್ಯರೂ ದೇವಾಲಯಕ್ಕೆ ಆಗಮಿಸಿದ್ದ ದಾಖಲೆಗಳಿವೆ. ಇದೀಗ ಆ ಸಾಲಿಗೆ ಜೋಸೆಫ್ ವಿಜಯ್ ಅವರ ಹೆಸರು ಕೂಡ ಸೇರ್ಪಡೆಯಾಗಿದೆ.