SK Home Ad
Home ಸಿನಿ ಮಿಲ್ಸ್ 4 ದಿನದಲ್ಲೇ ₹100 ಕೋಟಿ ಕ್ಲಬ್ ಸೇರಿದ ‘ಮಿರ್ಜಾಪುರ ದಿ ಮೂವಿ’; ಥಿಯೇಟರ್‌ನಲ್ಲಿ ತ್ರಿಪಾಠಿ ಭೌಕಾಲ್...

4 ದಿನದಲ್ಲೇ ₹100 ಕೋಟಿ ಕ್ಲಬ್ ಸೇರಿದ ‘ಮಿರ್ಜಾಪುರ ದಿ ಮೂವಿ’; ಥಿಯೇಟರ್‌ನಲ್ಲಿ ತ್ರಿಪಾಠಿ ಭೌಕಾಲ್ ಕಮಾಲ್

0
19

ಮುಂಬೈ: ಮಿರ್ಜಾಪುರ್‌ ದಿ ಮೂವಿ 4ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಚಿತ್ರ ಒಟ್ಟು 96.85 ಕೋಟಿ ರೂಪಾಯಿ ಗಳಿಸಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ ₹100 ಕೋಟಿ ದಾಟಿದೆ.

ಜನಪ್ರಿಯ ‘ಮಿರ್ಜಾಪುರ’ ವೆಬ್ ಸೀರಿಸ್‌ನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ. ಪಂಕಜ್ ತ್ರಿಪಾಠಿ, ಅಲಿ ಫಜಲ್, ದಿವ್ಯೇಂದು, ರವಿ ಕಿಶನ್ ಸೇರಿದಂತೆ ದೊಡ್ಡ ತಾರಾಗಣದ ‘ಮಿರ್ಜಾಪುರ: ದಿ ಮೂವಿ’ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಸೆಪ್ಟೆಂಬರ್ 4ರಂದು ಬಿಡುಗಡೆಯಾದ ಸಿನಿಮಾ ಕೇವಲ ನಾಲ್ಕು ದಿನಗಳಲ್ಲೇ ₹100 ಕೋಟಿ ಗಡಿ ದಾಟುವತ್ತ ಸಾಗಿದೆ.

ಚಿತ್ರದ ಮೊದಲ ಮೂರು ದಿನಗಳಲ್ಲೇ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹97.69 ಕೋಟಿ ಗಳಿಕೆ ದಾಖಲಾಗಿದ್ದು, ನಾಲ್ಕನೇ ದಿನ ₹100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಮೂಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ಇದರ ಕಲೆಕ್ಷನ್‌ಗೂ ಬಲ ನೀಡಿದೆ.

‘ಮಿರ್ಜಾಪುರ’ ವೆಬ್ ಸೀರಿಸ್‌ನ ಮೂರು ಸೀಸನ್‌ಗಳ ಯಶಸ್ಸಿನ ಬಳಿಕ ಇದೇ ಕಥಾ ಲೋಕವನ್ನು ದೊಡ್ಡ ಪರದೆಯ ಮೇಲೆ ತರುವ ಪ್ರಯತ್ನವೇ ‘ಮಿರ್ಜಾಪುರ: ದಿ ಮೂವಿ’. ಪಂಕಜ್ ತ್ರಿಪಾಠಿ ಮತ್ತೊಮ್ಮೆ ಕಾಲೀನ್ ಭಯ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಲಿ ಫಜಲ್, ದಿವ್ಯೇಂದು, ರವಿ ಕಿಶನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಮೊದಲ ದಿನದಿಂದಲೇ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಕಂಡುಬಂ ದಿದ್ದು, ಬಾಕ್ಸ್ ಆಫೀಸ್ ಸಂಖ್ಯೆಗಳಲ್ಲೂ ಅದರ ಪರಿಣಾಮ ಗೋಚರಿಸುತ್ತಿದೆ. ಮೂರನೇ ದಿನದ ವೇಳೆಗೆ ಚಿತ್ರವು ಭಾರತದಲ್ಲಿ ₹100 ಕೋಟಿಯ ಗಡಿಯ ಸಮೀಪ ತಲುಪಿತ್ತು.

ಚಿತ್ರಕ್ಕೆ ಸಿಕ್ಕಿರುವ ಆರಂಭಿಕ ಪ್ರತಿಕ್ರಿಯೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ‘ಮಿರ್ಜಾಪುರ: ದಿ ಮೂವಿ’ ಇನ್ನಷ್ಟು ದೊಡ್ಡ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ. 2026ರ ಪ್ರಮುಖ ಹಿಂದಿ ಚಿತ್ರಗಳ ಪೈಕಿ ಗಮನ ಸೆಳೆಯುತ್ತಿರುವ ಸಿನಿಮಾಗಳಲ್ಲಿ ಇದೂ ಒಂದಾಗಿದೆ.