SK Home Ad
Home ಸಿನಿ ಮಿಲ್ಸ್ ಬಿಗ್‌ಬಾಸ್ 13 ಶುಭಾರಂಭ: ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ ಮನೆಗೆ ನುಗ್ಗಿದ ಕಿಚ್ಚ ಸುದೀಪ್!

ಬಿಗ್‌ಬಾಸ್ 13 ಶುಭಾರಂಭ: ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ ಮನೆಗೆ ನುಗ್ಗಿದ ಕಿಚ್ಚ ಸುದೀಪ್!

0
8

ಬಿಗ್‌ಬಾಸ್ 13: ಕನ್ನಡ ಜನಪ್ರಿಯ ಹಾಗೂ ಬಹುನಿರೀಕ್ಷಿತ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ’ ಸೀಸನ್ 13ರ ಅಧಿಕೃತ ಚಾಲನೆಗೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 06ರ ಇಂದು ಸಂಜೆ 7ಕ್ಕೆ ಅದ್ಧೂರಿಯಾಗಿ ಈ ಶೋ ಪ್ರಾರಂಭವಾಗಲಿದ್ದು, ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮನೆಗೆ ಸ್ವಾಗತಿಸಲಿದ್ದಾರೆ. ಆದ್ರೆ ಈ ಶುಭಾರಂಭಕ್ಕೂ ಮುನ್ನವೇ ಸುದೀಪ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವ ಮೂಲಕ ವೀಕ್ಷಕರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದ್ದಾರೆ.

ಈ ಬಾರಿ ಬಿಗ್‌ಬಾಸ್ ಮನೆ ವೀಕ್ಷಿಸಲು ಸುದೀಪ್ ವಿಭಿನ್ನ ಹಾಗೂ ಆಕರ್ಷಕ ಶೈಲಿಯಲ್ಲಿ ಆಗಮಿಸಿದ್ದಾರೆ. ಫ್ಲೈಟ್ ಕ್ಯಾಪ್ಟನ್ ವೇಷದಲ್ಲಿ ವಿಮಾನ ಏರಿ ಬಂದ ಸುದೀಪ್, ಬಿಗ್‌ಬಾಸ್ ಮನೆಯ ಒಳಗೆ ಪ್ರವೇಶಿಸಿದ್ದಾರೆ. ಸ್ಪರ್ಧಿಗಳು ಮನೆಗೆ ಕಾಲಿಡುವ ಮುನ್ನವೇ, ಪ್ರೇಕ್ಷಕರಿಗೆ ಸಂಪೂರ್ಣ ಮನೆಯನ್ನು ಪರಿಚಯಿಸುವ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರೋಮೊ ಒಂದನ್ನು ಕಲರ್ಸ ಕನ್ನಡ ವಾಹಿನಿಯು ಈಗಾಗಲೇ ಬಿಡುಗಡೆ ಮಾಡಿದೆ.

ಪ್ರೋಮೊದಲ್ಲಿ ಕಂಡುಬಂದಂತೆ, ಸುದೀಪ್ ಅತ್ಯಂತ ಸಂಭ್ರಮದಿಂದ ಬಲಗಾಲಿಟ್ಟು ಬಿಗ್‌ಬಾಸ್ ಮನೆಯ ಒಳಗೆ ಹೆಜ್ಜೆ ಇಟ್ಟಿದ್ದಾರೆ. ಫ್ಲೈಟ್ ಕ್ಯಾಪ್ಟನ್ ಶೈಲಿಯಲ್ಲೇ ಇಡೀ ಮನೆಯ ಮೂಲೆ ಮೂಲೆಗಳಲ್ಲಿ ಸಂಚರಿಸಿ, ಈ ಬಾರಿಯ ಮನೆಯ ವಿಶೇಷತೆ ಹಾಗೂ ಮಾಡಲಾದ ಹೊಸ ಬದಲಾವಣೆಗಳನ್ನು ವೀಕ್ಷಕರಿಗೆ ವಿವರಿಸಿದ್ದಾರೆ. ಮನೆ ವಿನ್ಯಾಸದಲ್ಲಿ ಮಾಡಿರುವ ಹೊಸ ಪ್ರಯೋಗಗಳು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿವೆ.

ಪ್ರತಿ ಸೀಸನ್‌ನಲ್ಲೂ ತಮ್ಮ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುವ ಕಿಚ್ಚ ಸುದೀಪ್, ಈ ಬಾರಿಯೂ ಆರಂಭದಲ್ಲೇ ಫ್ಲೈಟ್ ಕ್ಯಾಪ್ಟನ್ ರೂಪದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಹಾಗೂ ಮನೆಯೊಳಗಿನ ಹೊಸ ವಾತಾವರಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.