SK Home Ad
Home ಸಿನಿ ಮಿಲ್ಸ್ 52ರ ಹರೆಯದಲ್ಲಿ ಬಾಲಿವುಡ್‌ ನಟಿ ಮಲೈಕಾ ಮ್ಯಾರೇಜ್ ಪ್ಲ್ಯಾನ್; ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆಗಿದ್ದು...

52ರ ಹರೆಯದಲ್ಲಿ ಬಾಲಿವುಡ್‌ ನಟಿ ಮಲೈಕಾ ಮ್ಯಾರೇಜ್ ಪ್ಲ್ಯಾನ್; ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆಗಿದ್ದು ಯಾಕೆ?

0
20

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಅವರ ಲವ್‌ ಸ್ಟೋರಿ ಬಾಲಿವುಡ್‌ನಲ್ಲಿ ಭಾರೀ ಸುದ್ದಿಯಾಗಿತ್ತು. ಹಲವು ವರ್ಷಗಳ ಕಾಲ ಜೊತೆಯಾಗಿದ್ದ ಈ ಜೋಡಿ ಮದುವೆಯಾಗಬಹುದು ಎಂಬ ನಿರೀಕ್ಷೆಯೂ ಅಭಿಮಾನಿಗಳಲ್ಲಿತ್ತು. ಆದರೆ ಮದುವೆಗೂ ಮುನ್ನವೇ ಇಬ್ಬರ ನಡುವೇ ಬ್ರೇಕ್ ಅಪ್ ಆಗಿದ್ಯಂತೆ. ಇದೀಗ ಮಲೈಕಾ ಮತ್ತು ಅರ್ಜುನ್ ಕಪೂರ್ ಏಕೆ ಬೇರ್ಪಟ್ಟರು? ಮಲೈಕಾ ಅರ್ಜುನ್ ಕಪೂರ್‌ನ ಬಿಟ್ಟು ಡೈಮಂಡ್ ಉದ್ಯಮಿ ಹರ್ಷ್ ಮೆಹ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಹಿಂದಿ ರಷ್ ಪಾಡಕಾಸ್ಟ್‌ನಲ್ಲಿ ಮಾತನಾಡಿದ ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರು ಮಲೈಕಾ ಮತ್ತು ಅರ್ಜುನ್ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ಸುಮಾರು 8-10 ತಿಂಗಳು ಮೊದಲೇ, ನನಗೆ ಬಂದ ಮಾಹಿತಿ ಪ್ರಕಾರ ಮಲೈಕಾ ಮದುವೆಯಾಗಲು ಬಯಸಿದ್ದರು. ಆದರೆ ಅರ್ಜುನ್ ಕಪೂರ್ ಆ ಸಮಯದಲ್ಲಿ ಮದುವೆಗೆ ಸಿದ್ಧರಾಗಿರಲಿಲ್ಲ ಅಥವಾ ಮದುವೆಯಾಗುವ ಆಸಕ್ತಿ ಹೊಂದಿರಲಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರ ಇಬ್ಬರ ನಡುವಿನ ಸಂಬಂಧದಲ್ಲಿ ಸಮಸ್ಯೆ ಉಂಟಾಗಿರಬಹುದು.

ಆದರೆ ಇದು ಅಧಿಕೃತವಾಗಿ ದೃಢಪಟ್ಟ ಕಾರಣವಲ್ಲ ಎಂಬುದು ಗಮನಿಸಬೇಕು. ಮಲೈಕಾ ಅಥವಾ ಅರ್ಜುನ್ ತಮ್ಮ ಬ್ರೇಕಪ್‌ಗೆ ಇದೇ ಕಾರಣ ಎಂದು ಸಾರ್ವಜನಿಕವಾಗಿ ಹೇಳಿಲ್ಲ. ಆದರೆ ಇಬ್ಬರೂ ಹೆಚ್ಚು ಪ್ರೀತಿ ಮಾಡುತ್ತಾ ಇದ್ದರು. ಅರ್ಜುನ್ ಕಪೂರ ಮಲೈಕಾನ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಎಲ್ಲದಕ್ಕೂ ಹ್ಯಾಪಿ ಎಂಡಿಂಗ್ ಆಗುವುದಿಲ್ಲ.

ನನಗೆ ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಮಲೈಕಾ ಅರೋರಾ ಅವರ ಹೆಸರು ಮತ್ತೊಬ್ಬ ಉದ್ಯಮಿಯೊಂದಿಗೆ ಕೇಳಿ ಬರುತ್ತಿದೆ. ಡೈಮಂಡ್ ಉದ್ಯಮಿ ಹರ್ಷ್ ಮೆಹ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಸಂಬಂಧವನ್ನು ಮಲೈಕಾ ಅಥವಾ ಹರ್ಷ್ ಮೆಹ್ತಾ ಇಬ್ಬರೂ ಅಧಿಕೃತವಾಗಿ ಖಚಿತಪಡಿಸಿಲ್ಲ.

ಯಾರು ಹರ್ಷ್ ಮೆಹ್ತಾ?
ವರದಿಗಳ ಪ್ರಕಾರ, ಹರ್ಷ್ ಮೆಹ್ತಾ ಡೈಮಂಡ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸ್ಯಾಂಕ್ಸ್ ಮ್ಯಾನೇಜ್ಮೆಂಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎಂದು ಹೇಳಲಾಗುತ್ತಿದೆ. ಅವರ ವಯಸ್ಸು ಸುಮಾರು 33 ವರ್ಷ ಎನ್ನಲಾಗಿದ್ದು, ಮಲೈಕಾ ಅವರಿಗಿಂತ 19 ವರ್ಷ ದೊಡ್ದವರು. ಮಲೈಕಾ ಮತ್ತು ಹರ್ಷ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಆದರೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ಹೀಗಾಗಿ ಸದ್ಯಕ್ಕೆ ಮಲೈಕಾ-ಹರ್ಷ್ ಸಂಬಂಧದ ಸುದ್ದಿ ಕೇವಲ ವದಂತಿಯ ಹಂತದಲ್ಲಿದೆ. ಅದೇ ರೀತಿ, ಮಲೈಕಾ-ಅರ್ಜುನ್ ಬ್ರೇಕಪ್‌ನ ಮದುವೆಯ ವಿಚಾರವೇ ಕಾರಣ ಎಂಬುದೂ ಅಧಿಕೃತವಾಗಿ ದೃಢಪಟ್ಟಿಲ್ಲ.