SK Home Ad
Home ನಮ್ಮ ಜಿಲ್ಲೆ ಕಲಬುರಗಿ ಡಾ. ಅಜಯ್ ಸಿಂಗ್‌ಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ

ಡಾ. ಅಜಯ್ ಸಿಂಗ್‌ಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ

0
53

ಕಲಬುರಗಿ: ಜೇವರ್ಗಿ ಶಾಸಕ ಡಾ. ಅಜಯ್ ಧರಂಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಈಗ ಅತ್ಯಂತ ಭಾವನಾತ್ಮಕ ಮತ್ತು ತೀವ್ರ ಸ್ವರೂಪ ಪಡೆದುಕೊಂಡಿದೆ.

ಜೇವರ್ಗಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಿಯಾಜ್ ಪಟೇಲ್ ಮುದಬಾಳ ಅವರು ತಮ್ಮ ನೆಚ್ಚಿನ ನಾಯಕನಿಗಾಗಿ ರಕ್ತದಲ್ಲೇ ಮನವಿ ಪತ್ರ ಬರೆದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದ ನಂತರ ರಿಯಾಜ್‌ ಮುದಬಾಳ ಅವರು ರಕ್ತದ ಪತ್ರವನ್ನ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲಿಸುವ ಸಲ್ಲಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಪಟೇಲ್ ಮುದಬಾಳ ಮಾತನಾಡಿ, ಡಾ. ಅಜಯ್ ಸಿಂಗ್ ನಮ್ಮ ನಾಯಕರಷ್ಟೇ ಅಲ್ಲ, ಯುವಶಕ್ತಿಯ ಆಶಾಕಿರಣ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಅವರು ಸಚಿವರಾಗಲೇಬೇಕು‌ ಎಂದರು.