ಧಾರವಾಡ: ಕಬ್ಬಿನ ಬೆಲೆ ನಿಗದಿ ಮಾಡಲು ತಜ್ಞರ ಸಮಿತಿ ರಚನೆ ಆಗಿದೆ. ಆದಷ್ಟು ಬೇಗನೆ ತಜ್ಞರ ಸಮಿತಿ ವರದಿ ನೀಡುವ ನಿರೀಕ್ಷೆ ಇದೆ ಎಂ.ಎಸ್.ಪಿ ಪರಿಷ್ಕರಣೆ ಆಗುವ ಭರವಸೆ ಇದೆ. ಮತ್ತೊಂದೆಡೆ ರಾಜ್ಯ ಸರ್ಕಾರಕ್ಕೆ ಕಬ್ಬನಿಂದ ಸಕ್ಕರೆ ಹಾಗೂ ಅದರ ಉಪ ಉತ್ಪನ್ನಗಳಿಂದ ಸಾವಿರಾರು ಕೋಟಿ ಜಿಎಸ್ಟಿ ಬರುತ್ತದೆ. ಅವರು ಕೈತೊಳೆದುಕೊಂಡು ಕುಳಿತುಕೊಳ್ಳದೇ ಎಸ್ಎಪಿ ಕಾನೂನಿನ್ವಯ ಬೆಂಬಲ ಬೆಲೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ಎಂ.ಎಸ್.ಪಿ ಬಹಳ ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಕಾಲಕಾಲಕ್ಕೆ ಪರಿಷ್ಕರಣೆಯ ಆಗಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಒಂದೇ ಬಾರಿ ಪರಿಷ್ಕರಣೆ ಆಗಬೇಕು ಅದು ಇಡಿ ದೇಶದಲ್ಲಿ ಆಗಬೇಕು. ಒಂದೊಂದು ರಾಜ್ಯದಲ್ಲಿ ಒಂದೂಂದು ಬೇಡಿಕೆ ಇದೆ. ಎಲ್ಲವನ್ನು ನೋಡಿ ಪರಿಷ್ಕರಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಈಗ ತಜ್ಞರ ಸಮಿತಿ ರಚನೆ ಆಗಿದೆ. ಆದಷ್ಟು ಬೇಗನೆ ತಜ್ಞರ ಸಮಿತಿ ವರದಿ ನೀಡುವ ನಿರೀಕ್ಷೆ ಇದೆ. ಎಂ.ಎಸ್.ಪಿ ಪರಿಷ್ಕರಣೆ ಆಗುವ ಭರವಸೆ ಇದೆ ಎಂದು ಹೇಳಿದರು.
ಮತ್ತೊಂದೆಡೆ ರಾಜ್ಯ ಸರ್ಕಾರದ ಕರ್ತವ್ಯ ಇದೆ ಕಬ್ಬನಿಂದ ಸಕ್ಕರೆ ಸೇರಿದಂತೆ ಇರತೆ ಉಪ ಉತ್ಪನ್ನಿನಿಂದ ಸಾವಿರಾರು ಕೋಟಿ ಜಿಎಸ್ಟಿ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಅವರು ಕೈತೊಳೆದುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಎಸ್.ಎ.ಪಿ ಕಾನೂನು ರಾಜ್ಯದಲ್ಲಿದೆ. ಇದರ ಅನ್ವಯ ಬೆಂಬಲ ಬೆಲೆ ನೀಡಬೇಕು. ತೂಕ ಹಾಗೂ ರೀಕವರಿಯಲ್ಲಿ ಸಮಸ್ಯೆ ಇದೆ, ಇದನ್ನು ಸರಿಪಡಿಸಬೇಕಿದೆ ಇದನ್ನೆಲ್ಲ ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ಹೇಳಿದರು.
ಸ್ಟಿಂಗ್ ಹಿಂದಿರುವ ಶಕ್ತಿ ಯಾರು: ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಸಿಎಂ ಅವರೇ ಸ್ಟೀಂಗ್ ಆಪರೇಷನ್ ಮಾಡಿ ಸಚಿವ ಸಂಪುಟ ನಾಯಕರನ್ನು ಆತಂಕದಲ್ಲಿ ದುಡಿದ್ದಾರೆ. ಇಂತಹ ಸರ್ಕಾರದಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ. ಸಿಬಿಐಗೆ ನೀಡಿದರೆ ನ್ಯಾಯ ಸಿಗುತ್ತದೆ. ಎಲ್ಲ ವಿಚಾರಗಳು ಸಿಬಿಐ ತನಿಖೆಕೆಗೆ ಒಳಪಟ್ಟರೆ ಯಾರು ಮಾಡಿಸಿದ್ದು, ಅದರ ಹಿಂದೆ ಯಾರಿದ್ದಾರೆ ಎಲ್ಲವೂ ಬಯಲಾಗುತ್ತದೆ ಎಂದರು.
ಇಂತಹ ಪ್ರಕರಣದಿಂದ ರಾಜಿನಾಯಕರಿಗೆ ಮುಜುಗರ ಆಗುತ್ತದೆ. ರಾಜಕೀಯ ವಿರೋಧಿಗಳು ರಾಜಕೀಯವಾಗಿ ವಿರೋಧಿಸಬೇಕು, ಅದು ರಾಜಮಾರ್ಗ ಅದನ್ನು ಬಿಟ್ಟು ವಾಮಮಾರ್ಗವಾಗಿ ಮಾಡುವಂತದ್ದು ನೈತಿಕತೆ ಅಲ್ಲ. ಒಮ್ಮೆ ಕೊನೆ ಆಗಬೇಕಾದರೆ ಸಂಪೂರ್ಣ ಆಳಕ್ಕೆ ಹೋಗಿ ತನಿಖೆ ಆಗಿ ಯಾರು ಮಾಡಿದ್ದಾರೆ ಏಕೆ ಮಾಡಿದ್ದಾರೆ, ಇದರ ಹಿಂದಿನ ಶಕ್ತಿ ಯಾವುದು. ಅವುಗಳನ್ನು ನಾವು ತನಿಖೆ ಮೂಲಕ ಹೊರಗೆ ತರಬೇಕಿದೆ ಎಂದು ಹೇಳಿದರು.





















