SK Home Ad
Home ನಮ್ಮ ಜಿಲ್ಲೆ ಗದಗ ಸಾಲದ ಸುಳಿಗೆ ತಳ್ಳುತ್ತಿವೆ ಗ್ಯಾರಂಟಿಗಳು: ಕಾಶೀ ಶ್ರೀ ಆಕ್ರೋಶ

ಸಾಲದ ಸುಳಿಗೆ ತಳ್ಳುತ್ತಿವೆ ಗ್ಯಾರಂಟಿಗಳು: ಕಾಶೀ ಶ್ರೀ ಆಕ್ರೋಶ

0
70

ಗದಗ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳ ವಿರುದ್ಧ ಕಾಶೀ ಜಂಗಮವಾಡಿ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇವುಗಳನ್ನು ಬಂದ್ ಮಾಡುವಂತೆ ಕೋರಿದ್ದಾರೆ.

ನಗರದಲ್ಲಿ ಏರ್ಪಡಿಸಿರುವ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡುವ ಸಂದರ್ಭದಲ್ಲಿ ಅವರು `ಈ ಉಚಿತ ಭಾಗ್ಯಗಳು ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿವೆ, ಕೂಡಲೇ ಬಂದ್ ಮಾಡಿ ರಾಜ್ಯಕ್ಕೆ, ಜನತೆಗೆ ಹೊರೆಯಾಗುವುದನ್ನು ತಪ್ಪಿಸಿ’ ಎಂದರು.

ನಾವು ಬಡವರಲ್ಲ, ನಮ್ಮಲ್ಲಿ 5 ಎಕರೆ ಇದ್ದರೆ 50-60 ಲಕ್ಷ ಆಸ್ತಿ ಇದ್ದಂತೆ ಎಂದು ಗುಡುಗಿದ ಶ್ರೀಗಳು, ಇಂದು ಕರ್ನಾಟಕದ ಮೇಲೆ 8 ಲಕ್ಷ ಕೋಟಿ ಸಾಲವಿದೆ. ಇದು ಕುಳಿತು ತಿನ್ನಲು ಮಾಡಿದ ಸಾಲ. ಈ ಸಾಲವನ್ನು ತೀರಿಸಲು ಸರ್ಕಾರ ಟ್ಯಾಕ್ಸ್‌, ಇತರೆ ಶುಲ್ಕ ಹೆಚ್ಚಿಸುತ್ತದೆ, ಅದನ್ನ ಕಟ್ಟಬೇಕಾದವರು ನಾವೇ ಎಂದು ಎಚ್ಚರಿಸಿದರು.