Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪಂಚಮಸಾಲಿ ಪೀಠದಲ್ಲಿ ತೀವ್ರಗೊಂಡ ಲೆಕ್ಕಕೊಡಿ ಚಳವಳಿ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಪಂಚಮಸಾಲಿ ಪೀಠದಲ್ಲಿ ತೀವ್ರಗೊಂಡ ಲೆಕ್ಕಕೊಡಿ ಚಳವಳಿ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

0
153

ಹರಿಹರ: ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ನಡೆದಿರುವ ಖರ್ಚು ವೆಚ್ಚದ ಕುರಿತ ಲೆಕ್ಕ ಕೊಡಬೇಕು. ಪೀಠದ ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿ ಸೋವವಾರ ಮಠದ ಆವರಣದಲ್ಲಿ ಭಕ್ತರು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸೇರಿದಂತೆ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಮಠದ ಆವರಣದಲ್ಲಿ ಜಮಾಯಿಸಿದ ಭಕ್ತರು, ಧರ್ಮದರ್ಶಗಳೇ ಶ್ರೀರಾಮನ ಲೆಕ್ಕ ಬೇಡ, ಶ್ರೀ ಕೃಷ್ಣನ ಲೆಕ್ಕ ಬೇಡ, ಧರ್ಮದ ಲೆಕ್ಕ ಕೊಡಿ ಎಂದು ಬ್ಯಾನರ್ ಹಿಡಿದು ಮಠದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪರಿಸ್ಥಿತಿ ಗಂಭೀರವಾಗುವುದನ್ನು ಅರಿತ ಪೊಲೀಸರು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.