SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಆರೆಸ್ಸೆಸ್ಸಿಗರು ನೈಜ ಸಂನ್ಯಾಸಿಗಳು, ಬಾಯಿಚಪಲಕ್ಕೆ ಕಾಂಗ್ರೆಸ್ ಟೀಕೆ

ಆರೆಸ್ಸೆಸ್ಸಿಗರು ನೈಜ ಸಂನ್ಯಾಸಿಗಳು, ಬಾಯಿಚಪಲಕ್ಕೆ ಕಾಂಗ್ರೆಸ್ ಟೀಕೆ

0
25

ಚಿತ್ರದುರ್ಗ: ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಎದುರಿಸಬೇಕಿರುವುದು ಬಿಜೆಪಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು. ಆದರೆ, ವಿನಾಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ, ಅದೊಂದು ದೇಶಪ್ರೇಮಿಗಳ ಸಂಘಟನೆ, ವರ್ಗರಹಿತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಆರೆಸ್ಸೆಸ್ ಕಾರ್ಯಾಲಯದಲ್ಲೇ ಉಳಿದುಕೊಂಡು ಸನ್ಯಾಸಿಗಳಂತೆ ದೇಶಕ್ಕಾಗಿ ಕೆಲಸ ಮಾಡುವ ಪ್ರಚಾರಕರಿದ್ದಾರೆ ಎಂದರು.

ಇಂತಹ ಪವಿತ್ರ ಸಂಘಟನೆಯ ಸ್ವಯಂಸೇವಕರಿಗೆ ಅವಮಾನ ಮಾಡುವುದು ಯಾರಿಗೂ ಶೋಭಿಸುವುದಿಲ್ಲ. ಕೇವಲ ಬಾಯಿ ಚಪಲಕ್ಕಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸುವುದನ್ನು ಕಾಂಗ್ರೆಸ್ಸಿಗರು ನಿಲ್ಲಿಸಬೇಕು. ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕಾಂಗ್ರೆಸ್‌ನ ಅವನತಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.