Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಟ್ರೆಂಡ್ಸ್‌ನಿಂದ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನ ಆರಂಭ

ಟ್ರೆಂಡ್ಸ್‌ನಿಂದ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನ ಆರಂಭ

0
31

ಬೆಂಗಳೂರು: ಭಾರತದ ಅತಿ ದೊಡ್ಡ ಮತ್ತು ಜನರಿಗೆ ಅತ್ಯಂತ ಪ್ರೀತಿಪಾತ್ರವಾಗಿರುವ ಫ್ಯಾಷನ್ ರಿಟೇಲ್ ತಾಣಗಳಲ್ಲಿ ಒಂದಾಗಿರುವ ಟ್ರೆಂಡ್ಸ್ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಎಂಬ ಅತ್ಯಾಕರ್ಷಕ ಹಾಗೂ ಹೊಸ ಗ್ರಾಹಕ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಶಾಪಿಂಗ್ ಅನುಭವವನ್ನು ಮರೆಯಲಾಗದ ರಜೆಯ ಅನುಭವವನ್ನಾಗಿ ಪರಿವರ್ತಿಸಲು ಒಂದು ಅನನ್ಯ ಅವಕಾಶ ನೀಡಿದೆ. ಈ ಅಭಿಯಾನವನ್ನು ಬ್ರಾಂಡ್ ರಾಯಭಾರಿ ಮತ್ತು ಜೆನ್ ಜೀ ಬಾಲಿವುಡ್ ತಾರೆ ಅನೀತ್ ಪಡ್ಡಾ ಮುನ್ನಡೆಸುತ್ತಿದ್ದಾರೆ.

ಫ್ಯಾಷನ್, ಸೃಜನಶೀಲತೆ ಮತ್ತು ತಂತ್ರಜ್ಞಾನ ಮೇಳೈಸಿರುವ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನವು ಭಾರತದಾದ್ಯಂತದ ಖರೀದಿದಾರರನ್ನು ಇದೇ ಮೊದಲ ಬಾರಿಗೆ ಸ್ಟೈಲ್ ಮತ್ತು ಪ್ರವಾಸದ ಅನುಭವ ಜತೆಯಾಗುವ ಸಂಹವನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ. ಯಾವುದೇ ಟ್ರೆಂಡ್ಸ್ ಮಳಿಗೆಯಲ್ಲಿ 1499 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬೆಲೆಗೆ ಶಾಪಿಂಗ್ ಮಾಡುವ ಗ್ರಾಹಕರು ಆ ಮಳಿಗೆಯಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವೈಯಕ್ತೀಕರಿಸಿದ ಎಐ ಸೃಷ್ಟಿತ ಪ್ರವಾಸದ ಹಾಡನ್ನು ರಚಿಸಿ ಈ ಅಭಿಯಾನಕ್ಕೆ ಮೀಸಲಾಗಿರುವ ಮೈಕ್ರೊಸೈಟ್‌ಗೆ ಸಲ್ಲಿಸುವ ಮೂಲಕ ಈ ಸ್ಪರ್ಧೆಗೆ ಪ್ರವೇಶಿಸಬಹುದು.

ಅತ್ಯಂತ ಸೃಜನಶೀಲ ಮತ್ತು ಆಕರ್ಷಕ ಪ್ರವೇಶಗಳಿಗೆ ಸಂಪೂರ್ಣ ಪಾವತಿಯ ರಜೆಯ ಅನುಭವಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದು ಖರೀದಿದಾರರಿಗೆ ತಮ್ಮ ಸ್ಟೈಲ್ ಅನ್ನು ಕನಸಿನ ಪ್ರವಾಸದೊಂದಿಗೆ ಆಚರಿಸುವ ಅವಕಾಶ ನೀಡಲಿದೆ. ಈ ಸ್ಪರ್ಧೆಯಲ್ಲಿ 100 ಕ್ಕೂ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಮೂಲಕ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನವು ದೇಶಾದ್ಯಂತ ಗ್ರಾಹಕರಿಗೆ ಉತ್ಸಾಹ ಮತ್ತು ಸಂತಸ ಹಂಚುವ ಭರವಸೆ ನೀಡಿದೆ.

ಟ್ರೆಂಡ್ಸ್ ಮಳಿಗೆಗಳಲ್ಲಿ ಈಗಾಗಲೇ ಆರಂಭವಾಗಿರುವ ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನ ಮೇ 17ರವರೆಗೆ ನಡೆಯಲಿದ್ದು, ಇದನ್ನು ಸ್ವಯಂ ಅಭಿವ್ಯಕ್ತಿ, ಫ್ಯಾಷನ್ ಪ್ರಜ್ಞೆಯ ಯೋಚನೆ ಮತ್ತು ಮೋಜು ಹಾಗೂ ತಲ್ಲೀನಗೊಳಿಸುವ ರೀತಿಯಲ್ಲಿ ಕಥೆ ಹೇಳುವಿಕೆ ಮೂಲಕ ಆಚರಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗೆ ಹೊಸ ಎಐ ಆಧರಿತ ಅನುಭವಗಳನ್ನು ಪ್ರವಾಸ ಬಹುಮಾನಗಳೊಂದಿಗೆ ಸಂಯೋಜಿಸುವ ಮೂಲಕ ಟ್ರೆಂಡ್ಸ್ ಆಧುನಿಕ ಭಾರತೀಯ ಗ್ರಾಹಕರಿಗೆ ರಿಟೇಲ್ ಶಾಪಿಂಗ್ ಪಯಣಕ್ಕೆ ಹೊಸ ರೂಪ ನೀಡುವ ಅಥವಾ ಮರುವ್ಯಾಖ್ಯಾನಿಸುವುದನ್ನು ಮುಂದುವರೆಸಿದೆ.

ಈ ಅಭಿಯಾನವು ರಜಾದಿನಗಳಲ್ಲಿ ಗ್ರಾಹಕರ ತೊಡಗುವಿಕೆಯನ್ನು ಸದೃಢಗೊಳಿಸುವ ಗುರಿ ಹೊಂದಿದೆ ಹಾಗೂ ಇಡೀ ಕುಟುಂಬಕ್ಕೆ ಟ್ರೆಂಡ್ ನೇತೃತ್ವದ, ಕೈಗೆಟಕುವ ಫ್ಯಾಷನ್ ತಾಣ ಎಂಬ ಟ್ರೆಂಡ್ಸ್‌ನ ಸ್ಥಾನವನ್ನು ಇನ್ನಷ್ಟು ಬಲಗೊಳಿಸಿದೆ. ‘ದಿಸ್ ಹಾಲಿಡೇ, ಟ್ರೆಂಡ್ ಇಟ್’ ಅಭಿಯಾನದೊಂದಿಗೆ ಟ್ರೆಂಡ್ಸ್ ಮತ್ತೊಮ್ಮೆ ಮೌಲ್ಯ, ಸ್ಟೈಲ್ ಮತ್ತು ಹೊಸತನದ ಅನುಭವಗಳನ್ನು ಜತೆಗೂಡಿಸಿದೆ. ಇವು ಗ್ರಾಹಕರಿಗೆ ಶಾಪಿಂಗ್‌ಗೂ ಮೀರಿದ ಮತ್ತು ಜೀವಿತಾವಧಿಯವರೆಗೂ ಉಳಿಯುವ ಸವಿನೆನಪುಗಳಾಗಲಿವೆ.