ಬೆಂಗಳೂ: ಪಾಶ್ಚಿಮಾತ್ಯ ದೇಶಗಳ ಸಂಘೆರ್ಷದಿಂದ ಇಂಧನದ ಬೆಲೆ ಏರಿಕೆ, ಗ್ಯಾಸ್‌ಗಳಿಗೆ ಕೊರತೆ ಹೀಗೆಲ್ಲ ಸಮಸ್ಯಗಳನ್ನು ಎದುರಿಸುತ್ತಿರುವ ನಮ್ಮ ಕರ್ನಾಟಕ ಇದೀಗ ಮತ್ತೊಂದು ಸವಾಲನ್ನು ಎದುರಿಸಬೇಕಿದೆ. ಈ ಕುರಿತು ಇನ್ನಷ್ಟೂ ಮಾಹಿತಿ ತಿಳಿಯಿರಿ..
ರಾಜ್ಯ ಸರ್ಕಾರದ ಕನಿಷ್ಠ ವೇತನ ಪರಿಷ್ಕರಣೆ ನಿಯಮದಿಂದಾಗಿ ಕರ್ನಾಟಕದಲ್ಲಿ ಹೋಟೆಲ್ ತಿನಿಸುಗಳ ದರ ಶೀಘ್ರದಲ್ಲೇ ಶೇಕಡಾ 60 ರಷ್ಟು ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಹೊಸ ನಿಯಮಗಳ ಪ್ರಕಾರ ಹೋಟೆಲ್ ಉದ್ಯಮ ನಡೆಸಲು ವೆಚ್ಚ ದುಪ್ಪಟ್ಟಾಗಲಿದ್ದು, ಬೆಲೆ ಹೆಚ್ಚಿಸದಿದ್ದರೆ ಉದ್ಯಮವನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (KSHA) ಎಚ್ಚರಿಕೆ ನೀಡಿದೆ.
ಈ ದರ ಹೆಚ್ಚಳ ಜಾರಿಗೆ ಬಂದರೆ, ಪ್ರಸ್ತುತ 40 ರಿಂದ 50 ರೂಪಾಯಿ ಇರುವ ಒಂದು ಪ್ಲೇಟ್ ಇಡ್ಲಿ ಬೆಲೆ 90 ರೂಪಾಯಿಗೆ ತಲುಪಲಿದೆ. ಹಾಗೆಯೇ 80 ರಿಂದ 90 ರೂಪಾಯಿ ಇರುವ ಮಸಾಲೆ ದೋಸೆ ದರ 150 ರೂಪಾಯಿಗೆ ಹಾಗೂ ಸಸ್ಯಾಹಾರಿ ಊಟದ ದರ 250 ರಿಂದ 300 ರೂಪಾಯಿಗೆ ಏರಿಕೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ 350 ರೂಪಾಯಿಗೆ ಸಿಗುತ್ತಿದ್ದ ಬಿರಿಯಾನಿ ಬೆಲೆ ಬರೋಬ್ಬರಿ 500 ರೂಪಾಯಿ ಮುಟ್ಟುವ ಮುನ್ಸೂಚನೆ ಇದೆ.
ಬೆಲೆ ಏರಿಕೆಗೆ ಮುಖ್ಯ ಕಾರಣಗಳೇನು?
ಸರ್ಕಾರವು ಕಾರ್ಮಿಕರ ವೇತನವನ್ನು ಶೇ. 60 ರಷ್ಟು ಹೆಚ್ಚಿಸಿದ್ದು, ಕೌಶಲ್ಯರಹಿತ ಕಾರ್ಮಿಕರಿಗೆ 19,300 ರೂ. ಹಾಗೂ ಕೌಶಲ್ಯಭರಿತ ಕಾರ್ಮಿಕರಿಗೆ 31,100 ರೂ. ವರೆಗೆ ಕನಿಷ್ಠ ವೇತನ ನಿಗದಿಪಡಿಸಿದೆ. ಹೆಚ್ಚುವರಿ ಸೌಲಭ್ಯಗಳ ವೆಚ್ಚ ವೇತನದ ಜೊತೆಗೆ ಪಿಎಫ್, ಇಎಸ್‌ಐ, ವಸತಿ, ಉಚಿತ ಊಟ ಮತ್ತು ಯೂನಿಫಾರ್ಮ್ ಸೇರಿ ಒಬ್ಬ ಕಾರ್ಮಿಕನ ಮೇಲಿನ ಒಟ್ಟು ವೆಚ್ಚ 35,000 ರೂಪಾಯಿಗೆ ತಲುಪುತ್ತದೆ.
ವಾಣಿಜ್ಯ ಗ್ಯಾಸ್ ದರ ಏರಿಕೆ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆ ಕೇವಲ ಕೆಲವೇ ತಿಂಗಳುಗಳಲ್ಲಿ 1,884 ರೂಪಾಯಿಯಿಂದ 3,152 ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಕಸ ಸಂಗ್ರಹ ಸೆಸ್ ಶುಲ್ಕಗಳು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿವೆ. ಹೋಟೆಲ್‌ಗಳು ಈಗಾಗಲೇ ಕಾರ್ಮಿಕರಿಗೆ ಉಚಿತ ಊಟ, ವಸತಿ ನೀಡುತ್ತಿರುವುದರಿಂದ ಆತಿಥ್ಯ ವಲಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಸಣ್ಣ ಹೋಟೆಲ್‌ಗಳು ಮುಚ್ಚಿ, ಗ್ರಾಹಕರು ಅನಿವಾರ್ಯವಾಗಿ ಪಾದಚಾರಿ ಮಾರ್ಗದ ಹೋಟೆಲ್‌ಗಳತ್ತ ಮುಖ ಮಾಡಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.






















