SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಹುಡುಗಿ ವಿಷಯವಾಗಿ ಗಲಾಟೆ: ಯುವಕನಿಗೆ ಚೂರಿ ಇರಿತ

ಹುಡುಗಿ ವಿಷಯವಾಗಿ ಗಲಾಟೆ: ಯುವಕನಿಗೆ ಚೂರಿ ಇರಿತ

0
2998

ಬಾಗಲಕೋಟೆ: ತೇತದಾಳ ಪಟ್ಟಣದಲ್ಲಿ ಯುವತಿ‌ ವಿಷಯವಾಗಿ ಉಂಟಾದ ಜಗಳದಲ್ಲಿ ಯುವಕನೋರ್ವನಿಗೆ ಚೂರಿ ಇರಿತವಾಗಿದೆ.

ತೇರದಾಳದ ಅರಳಿಕಟ್ಟಿಗಲ್ಲಿಯ ಜೈನ ಸಮುದಾಯದ ರಾಹುಲ್ ಬಾಹುಬಲಿ ಸಪ್ತಸಾಗರ (19) ಚೂರಿ ಇರಿತಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿ. ಅದೇ ಸಮುದಾಯದ ಯುವಕ ಚೂರಿ ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಯುವತಿ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗಿದ್ದು,‌ ತನಿಖೆಯಿಂದಷ್ಟೇ ಸ್ಪಷ್ಟ ಕಾರಣ ತಿಳಿದು ಬರಬೇಕಿದೆ.