ಬೆಂಗಳೂರು: ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 115 ರೂ. ಗಳನ್ನು ಹಾಗೂ ಮನೆ ಬಳಕೆಯ ಸಿಲಿಂಡರ್‌ಗೆ 60 ರೂ. ಹೆಚ್ಚಳ ಮಾಡಿದೆ. ಇದು ಬಹಳ ಹೆಚ್ಚಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಅವರು ಮಾಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ಸರಬರಾಜಿನ ಕುರಿತು ಆತಂಕವಿರುವುದು ಬೇರೆ ವಿಷಯ ಆದರೆ ಎಲ್‌ಪಿಜಿ ದರ ಹೆಚ್ಚಳವಾಗಿದೆ ಎನ್ನುವುದು ಬೇರೆ ವಿಷಯ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.




















