SK Home Ad
Home ನಮ್ಮ ಜಿಲ್ಲೆ ಕಲಬುರಗಿ ಸಂಸದರ ಮನವಿಗೂ ಲೆಕ್ಕಿಸದೆ ಜಿಲ್ಲಾಡಳಿತದಿಂದ ಅಕ್ರಮ ತೆರವು‌ ಕಾರ್ಯಾಚರಣೆ

ಸಂಸದರ ಮನವಿಗೂ ಲೆಕ್ಕಿಸದೆ ಜಿಲ್ಲಾಡಳಿತದಿಂದ ಅಕ್ರಮ ತೆರವು‌ ಕಾರ್ಯಾಚರಣೆ

0
155

ಕಲಬುರಗಿ: ಗುರುವಾರ ಬೆಳ್ಳಂ ಬೆಳಿಗ್ಗೆ ಬುಲ್ಡೋಜರ್ ಸದ್ದು ಮಾಡಿದೆ. ನಗರದ ಆಶ್ರಯ ಕಾಲನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 40 ಕುಟುಂಬಗಳು ವಾಸವಿದ್ದ ಮನೆಗಳನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.
ಸರ್ವೇ ನಂಬರ್ 9/3ರ ವಾರ್ಡ್ ನಂಬರ್ 23ರಲ್ಲಿ ಆಪರೇಷನ್ ಡೆಮಾಲಿಷ್ ಕಾರ್ಯಾಚರಣೆ ಮಾಡಲಾಗಿದೆ.
ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದ ಪರಿಣಾಮ ನೆಲಸಮ ಮಾಡಲಾಗಿದೆ. ಏಕಾಏಕಿ ಡೆಮಾಲಿಷ್ ಮಾಡುವ ಮೂಲಕ ನಮ್ಮನ್ನ ಬೀದಿಗೆ ತಂದು ನಿಲ್ಲಿಸಲಾಗಿದೆ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ. ಒಂದಷ್ಟು ದಿನ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಸದ ಡಾ. ಉಮೇಶ್ ಜಾಧವ ಸೇರಿ ಹಲವು ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ಯಾರೆ ಎಂದಿಲ್ಲ.