SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕಾಂಗ್ರೆಸ್ ಹೈಕಮಾಂಡ್ ಪವರ್ ಲೆಸ್:ಎಂ.ಪಿ.ರೇಣುಕಾಚಾರ್ಯ

ಕಾಂಗ್ರೆಸ್ ಹೈಕಮಾಂಡ್ ಪವರ್ ಲೆಸ್:ಎಂ.ಪಿ.ರೇಣುಕಾಚಾರ್ಯ

0
173
renukacharya

ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ಪವರ್ ಲೆಸ್, ಅವರೆಲ್ಲ ನರವಿಲ್ಲದವರು ಎಂದು ಕಾಂಗ್ರೆಸ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಕಾಂಗ್ರೆಸ್ ಅಂದರೆ ಅದೊಂದು ಗುಲಾಮಗಿರಿ ಪಕ್ಷ. ಕಾಂಗ್ರೆಸ್ ನವರಾರು ಭಾರತ್ ಮಾತಾಕಿ ಜೈ ಅನ್ನಲ್ಲ ಬದಲಿಗೆ ಸೋನಿಯಾ ಗಾಂಧೀಕಿ ಜೈ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕೀ ಜೈ ಅಂತಾರೆ.ಇವರಿಗೆ ಮುಂದೆ ಹುಟ್ಟುವ ಮಕ್ಕಳಿಗೂ ಜೈ ಅಂತಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದಕರ ಕೈಗೆ ಆಡಳಿತ ಕೊಟ್ಟಂತಾಗುತ್ತದೆ. ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ನವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜ್ಯದಲ್ಲಿ ಪ್ರಜ್ಞಾವಂತ ಜನರಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠವನ್ನ ಕಲಿಸುತ್ತಾರೆ ಎಂದರು.
ವಿಧಾನಸೌಧ ಮಹಡಿಯಲ್ಲಿ 10 ಲಕ್ಷ ಸಿಕ್ಕ ಪ್ರಶ್ನೆಗೆ ಅಲ್ಲಿ ಸಿಕ್ಕಿರುವ ಹಣಕ್ಕೂ ಸರ್ಕಾರಕ್ಕೂ ಯಾವುದೇ ರೀತಿ ಸಂಬಂಧವಿಲ್ಲ. ಕಲ್ಲಿದ್ದಲು, 2ಜಿ ಸ್ಕ್ರೇಕ್ಟ್ರಂ ಹಗರಣ ಸೇರಿದಂತೆ ಬಹುಲಕ್ಷ ಕೋಟಿ ಹಗರಣ ಮಾಡಿದವರು ಕಾಂಗ್ರೆಸ್ಸಿಗರು ಎಂದು ಆರೋಪಿಸಿದರು.