ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಂಘಟಿತ ಬೌಲಿಂಗ್ ದಾಳಿಯಿಂದಾಗಿ ಮುಂಬೈ ಇಂಡಿಯನ್ಸ್ ತಂಡ ರನ್ ಗಳಿಸಲು ಪರದಾಡುವಂತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನಿಂಗ್ಸ್ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ ಮುಂಬೈ ಇಂಡಿಯನ್ಸ್ ಪವರ್ ಪ್ಲೇ ಮುಗಿಯುವುದರೊಳಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
5.3 ಓವರ್‌ಗಳಲ್ಲಿಯೇ ರಯಾನ್ ರಿಕೆಲ್ಟನ್ (6), ನಮನ್ ಧೀರ್ (0), ರೋಹಿತ್ ಶರ್ಮಾ (15) ಮತ್ತು ಸೂರ್ಯಕುಮಾರ್ ಯಾದವ್ (15) ಅವರ ವಿಕೆಟ್ ಕಳೆದುಕೊಂಡು ಮುಂಬೈ ಸಂಕಷ್ಟಕ್ಕೆ ಒಳಗಾಯಿತು.
ಐದನೇ ವಿಕೆಟ್‌ಗೆ ತಿಲಕ್ ವರ್ಮಾ (20) ಮತ್ತು ಹಾರ್ದಿಕ್ ಪಾಂಡ್ಯ (26) ಜೋಡಿ 43 ರನ್‌ಗಳ ಜತೆಯಾಟ ನಡೆಸಿದ್ದೇ ಇನ್ನಿಂಗ್ಸ್ ಅತ್ಯಧಿಕ ರನ್‌ಗಳ ಜತೆಯಾಟ ಎನಿಸಿಕೊಂಡಿತು.
ವಿಲ್ ಜ್ಯಾಕ್ಸ್ ಕೂಡ ಕೇವಲ 14 ರನ್‌ಗಳ ಕಾಣಿಕೆ ನೀಡಿ ಮರಳಿದರು. ಆದರೆ ಕೊನೆಗೆ ಕ್ರಿಸ್‌ಗೆ ಬಂದ ಕಾರ್ಬಿನ್ ಬಾಷ್ ಕೇವಲ 18 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 32 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಕೋಲ್ಕತ್ತಾ ಪರ ಕ್ಯಾಮರೂನ್ ಗ್ರೀನ್ 23ಕ್ಕೆ 2, ಸೌರಭ್ ದುಬೆ 34ಕ್ಕೆ 2, ಕಾರ್ತಿಕ್ ತ್ಯಾಗಿ 37ಕ್ಕೆ 2 ವಿಕೆಟ್ ಪಡೆದರೆ, ಸುನೀಲ್ ನರೈನ್ 13ಕ್ಕೆ ಒಂದು ವಿಕೆಟ್ ಪಡೆದರು.























