Home Advertisement
Home ಕ್ರೀಡೆ IPL 2026: ಮಾರ್ಷ್‌-ಜೋಶ್ ಅಬ್ಬರ, ರಾಜಸ್ಥಾನ್‌ಗೆ 221 ರನ್ ಗುರಿ

IPL 2026: ಮಾರ್ಷ್‌-ಜೋಶ್ ಅಬ್ಬರ, ರಾಜಸ್ಥಾನ್‌ಗೆ 221 ರನ್ ಗುರಿ

0
27

ಜೈಪುರ್‌: ಆರಂಭಿಕ ಆಟಗಾರರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ ಬೃಹತ್‌ ರನ್‌ ದಾಖಲಿಸಿದೆ.

ಲಖನೌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 220 ರನ್‌ ಗಳಿಸಿತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್‌ ಲೆಕ್ಕಾಚಾರವನ್ನು ಆರಂಭದಲ್ಲಿಯೇ ಮಿಚೆಲ್‌ ಮಾರ್ಷ್‌ ಮತ್ತು ಜೋಶ್ ಇಂಗ್ಲಿಸ್ ಉಲ್ಟಾ ಮಾಡಿತು.

ಮೊದಲ ಓವರ್‌ನಿಂದಲೇ ಬೌಲರ್‌ಗಳನ್ನು ದಂಡಿಸಲು ಶುರು ಮಾಡಿದ ಆರಂಭಿಕ ಜೋಡಿ 8 ಓವರ್‌ಗಳಾಗುವಷ್ಟರಲ್ಲಿಯೇ ತಂಡದ ಮೊತ್ತವನ್ನು 100 ಗಡಿ ದಾಟಿಸಿತು.

ಜೋಶ್ ಇಂಗ್ಲಿಸ್ ಕೇವಲ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನಿಂದ 60 ರನ್‌ಗಳಿಸಿ ಯಶ್ ರಾಜ್ ಪೂಂಜಾ ಅವರಿಗೆ ವಿಕೆಟ್‌ ಒಪ್ಪಿಸಿದರು. ನಿಕೋಲಸ್ ಪೂರನ್ ಕ್ರಿಸ್‌ಗೆ ಬರುತ್ತಿದ್ದಂತೆ 2 ಸಿಕ್ಸರ್‌ ಬಾರಿಸಿ ಕೇವಲ 16 ರನ್‌ಗಳಿಗೆ ಆಟ ಮುಗಿಸಿದರು.

ಮೂರನೇ ವಿಕೆಟ್‌ಗೆ ಮಿಚೆಲ್‌ ಮಾರ್ಷ್‌ ಜತೆಯಾದ ನಾಯಕ ರಿಷಭ್‌ ಪಂತ್‌ 23 ಎಸೆತದಲ್ಲಿ 35 ರನ್‌ಗಳಿಸಿ, 64 ರನ್‌ಗಳ ಜತೆಯಾಟ ನಡೆಸಿ ಅನಗತ್ಯ ರನ್‌ ಕದಿಯಲು ಹೋಗಿ ಬಲಿಯಾದರು.

ಕೊನೆಯ ಓವರ್‌ ಮೊದಲ ಎಸೆತದಲ್ಲಿ ಪಂತ್‌ ಹೊರನಡೆದರೆ, ಅದೇ ಓವರ್‌ನ ಐದನೇ ಎಸೆತದಲ್ಲಿ ಮಿಚೆಲ್‌ ಮಾರ್ಷ್‌ ಎರಡು ರನ್‌ ಕದಿಯಲು ಹೋಗಿ ರನೌಟ್‌ ಆದರು.

ಮಿಚೆಲ್‌ ಮಾರ್ಷ್‌ ಕೇವಲ 57 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್‌ನಿಂದ 96 ರನ್‌ ಸಿಡಿಸಿ ಲಖನೌ ಬೃಹತ್‌ ಮೊತ್ತ ಪೇರಿಸುವಲ್ಲಿ ನೆರವಾದರು.

ರಾಜಸ್ಥಾನ ರಾಯಲ್ಸ್‌ ಪರ ಯಶ್ ರಾಜ್ ಪೂಂಜಾ 35ಕ್ಕೆ 2 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್ 39ಕ್ಕೆ ಒಂದು ವಿಕೆಟ್‌ ಪಡೆದರು.