Home Advertisement
Home ಸುದ್ದಿ ವಿದೇಶ ಮೋದಿ ಆಪ್ತ ಮಿತ್ರ ಟ್ರಂಪ್ ಮೇಲೆ ದಾಳಿ ಯತ್ನ; ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ವಾಷಿಂಗ್ಟನ್! ಭಾರತದ...

ಮೋದಿ ಆಪ್ತ ಮಿತ್ರ ಟ್ರಂಪ್ ಮೇಲೆ ದಾಳಿ ಯತ್ನ; ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ವಾಷಿಂಗ್ಟನ್! ಭಾರತದ ಪ್ರಧಾನಿ ಹೇಳಿದ್ದೇನು?

0
83

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಭಾನುವಾರ ರಾತ್ರಿ ನಡೆದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅದೃಷ್ಟವಶಾತ್ ಈ ದಾಳಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, “ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡ ಸುರಕ್ಷಿತವಾಗಿರುವುದು ನೆಮ್ಮದಿಯ ವಿಷಯ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ, ಇದನ್ನು ಕಟುವಾಗಿ ಖಂಡಿಸುತ್ತೇನೆ,” ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: http://ಯಾರು ಈ ಕೋಲ್ ಅಲೆನ್; ಟ್ರಂಪ್ ಡಿನ್ನರ್‌ನಲ್ಲಿ ಗುಂಡು ಹಾರಿಸಿದ್ದು ಯಾಕೆ? ಭೀಕರ ಸತ್ಯ ಬಯಲು!

ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಗಣ್ಯರೆಲ್ಲರೂ ಸಮಾವೇಶಗೊಂಡಿದ್ದ ಸಂದರ್ಭದಲ್ಲಿ, ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಟೋಮಸ್ ಅಲೆನ್ ಎಂಬಾತ ಶಾರ್ಟ್‌ಗನ್‌ನೊಂದಿಗೆ ಭದ್ರತಾ ವಲಯವನ್ನು ಪ್ರವೇಶಿಸಲು ಯತ್ನಿಸಿದ್ದಾನೆ. ಈ ವೇಳೆ ಆತ ನಡೆಸಿದ ಗುಂಡಿನ ದಾಳಿಯಲ್ಲಿ ಸೀಕ್ರೆಟ್ ಸರ್ವಿಸ್ ಏಜೆಂಟ್ ಒಬ್ಬರಿಗೆ ಗುಂಡು ತಗುಲಿದೆ. ಆದರೆ, ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಹೋಟೆಲ್ ಒಳಗಿದ್ದ ನೂರಾರು ಅತಿಥಿಗಳು ಭಯಭೀತರಾಗಿ ಟೇಬಲ್‌ಗಳ ಕೆಳಗೆ ಅವಿತು ಕುಳಿತರು. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಗಣ್ಯರನ್ನು ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಿವೆ.

ಘಟನೆಯ ಬೆನ್ನಲ್ಲೇ ಹೋಟೆಲ್ ಆವರಣವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದ್ದು, ನ್ಯಾಷನಲ್ ಗಾರ್ಡ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ದಾಳಿಕೋರ ಅಲೆನ್‌ನ ಮೂಲ ಉದ್ದೇಶವೇನಿತ್ತು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಅಮೆರಿಕದ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವೊಂದರಲ್ಲಿ ಇಂತಹ ಭದ್ರತಾ ಲೋಪ ಉಂಟಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ತನಿಖೆ ಚುರುಕುಗೊಂಡಿದ್ದು, ವಾಷಿಂಗ್ಟನ್ ಪೊಲೀಸರು ಮತ್ತು ಗುಪ್ತಚರ ಇಲಾಖೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿವೆ.