ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ದಾಳಿಯಿಂದಾಗಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 208 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ಕೇವಲ 104 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು.
ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ (7) ಮತ್ತು ಡ್ಯಾನಿಶ್ ಮಾಲೆವಾರ್ (0) ಜೋಡಿ 7 ರನ್ ಆಗವಷ್ಟರಲ್ಲಿಯೇ ಪೆವಿಲಿಯನ್ ಸೇರಿದರು. ಇವರ ಹಿಂದೆಯೇ ನಮನ್ ಧೀರ್ ಕೂಡ ಶೂನ್ಯ ಸುತ್ತಿದರು.
ತಂಡದ ಮೊತ್ತ 11 ರನ್ ಆಗುವಷ್ಟರಲ್ಲಿಯೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್ (36) ಮತ್ತು ತಿಲಕ್ ವರ್ಮಾ (37) ಜೋಡಿ 73 ರನ್‌ಗಳ ಜತೆಯಾಟ ನಡೆಸಿ ಆಸರೆಯಾದರು. ಆದರೆ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ವಿಫಲರಾದರು.
ಮುಂಬೈ 84 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಗೆ ಹೋಗುತ್ತಿರುವಾಗಲೇ ಮತ್ತೇ ಸಂಕಷ್ಟ ಎದುರಾಯಿತು. ತಂಡದ ಮೊತ್ತಕ್ಕೆ ಕೇವಲ 4 ರನ್ ಸೇರುವಷ್ಟರಲ್ಲಿಯೇ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತು.
ಬಳಿಕ ಮತ್ತೇ ಚೇತರಿಸಿಕೊಳ್ಳದ ಮುಂಬೈ ಅಂತಿಮವಾಗಿ 104 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 103 ರನ್‌ಗಳ ಹೀನಾಯ ಸೋಲು ಅನುಭವಿಸಬೇಕಾಯಿತು.
ಚೆನ್ನೈ ಪರ ಅಕೇಲ್ ಹೊಸೈನ್ ಕೇವಲ 17 ರನ್ ನೀಡಿ 4 ವಿಕೆಟ್ ಉರುಳಿಸಿದರು. ನೂರ್ ಅಹ್ಮದ್ 24ಕ್ಕೆ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಮುಂಬೈ ಇಂಡಿಯನ್ಸ್ ತನ್ನ ಲೆಕ್ಕಾಚಾರದಂತೆ ಉತ್ತಮ ಬೌಲಿಂಗ್ ದಾಳಿಯನ್ನು ನಡೆಸಿತಾದರೂ, ಸಂಜು ಸ್ಯಾಮ್ಸ್‌ನ್ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಶತಕ ಪೂರೈಸುವ ಮೂಲಕ ಅಜೇಯ 101 ರನ್ ಗಳಿಸಿದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 ರನ್ ಪೇರಿಸಿತು.
ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (22) ಔಟಾದರು. ಅವರ ಹಿಂದೆಯೇ ಸರ್ಫರಾಜ್ ಖಾನ್ (14), ಶಿವಂ ದುಬೆ (05) ಅಲ್ಪ ರನ್‌ಗಳಿಸಿ ಹೊರನಡೆದರು.
ಡೆವಾಲ್ಡ್ ಬ್ರೆವಿಸ್ (21), ಕಾರ್ತಿಕ್ ಶರ್ಮಾ (18) ಮತ್ತು ಜೇಮೀ ಓವರ್ಟನ್ (15) ಕೂಡ ಅತ್ಯಲ್ಪ ರನ್ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು.
ಎಎಮ್ ಗಜನ್ಫರ್, ಅಶ್ವನಿ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.























