SK Home Ad
Home ನಮ್ಮ ಜಿಲ್ಲೆ ವಿಮಾನದಲ್ಲಿ ತಾಂತ್ರಿಕ ದೋಷವಿರಲಿಲ್ಲ, ವದಂತಿ ಸುಳ್ಳು: ಸ್ಪಷ್ಟನೆ

ವಿಮಾನದಲ್ಲಿ ತಾಂತ್ರಿಕ ದೋಷವಿರಲಿಲ್ಲ, ವದಂತಿ ಸುಳ್ಳು: ಸ್ಪಷ್ಟನೆ

0
510

ಹುಬ್ಬಳ್ಳಿ: `ಫ್ಲೈ-91′ ವಿಮಾನ -ಐಸಿ3401 (ಹೈದರಾಬಾದ್-ಹುಬ್ಬಳ್ಳಿ) ಏಪ್ರಿಲ್ 19 ರಂದು ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಆಗದೇ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಿದ್ದಕ್ಕೆ ಫ್ಲೈ 91 ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಚಾಕೋ ಸ್ಪಷ್ಟನೆ ನೀಡಿದ್ದಾರೆ.

ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಲ್ಯಾಂಡಿಂಗ್ ವೇಳೆ ಟರ್ಬ್ಯುಲೆನ್ಸ್ ಹಾಗೂ ಬಲವಾದ ಅಡ್ಡಗಾಳಿ ಇದ್ದ ಕಾರಣ, ಸುರಕ್ಷತಾ ಕ್ರಮವಾಗಿ 70 ನಿಮಿಷ ಕಾದ ನಂತರ ಬೆಂಗಳೂರಿಗೆ ಡೈವರ್ಟ್ ಮಾಡಲಾಯಿತು. ಸಾಕಷ್ಟು ಇಂಧನ ಇತ್ತು. ಯಾವುದೇ ಅಪಾಯ ಇರಲಿಲ್ಲ. ಅಲ್ಲದೇ ವಿಮಾನವನ್ನು ವಾಯುಪಡೆಯ ನಿವೃತ್ತ ಅಧಿಕಾರಿ ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ.

ಇದು ಡೈವರ್ಷನ್ ವೈಫಲ್ಯವೂ ಅಲ್ಲ. ಬದಲಾಗಿ ಸುರಕ್ಷತಾ ವ್ಯವಸ್ಥೆಗಾಗಿ ಸರಿಯಾದ ನಿರ್ಧಾರ ಕ್ರಮವಾಗಿದೆ. ಆ ದಿನ ಕೇವಲ ಫ್ಲೈ91 ವಿಮಾನ ಮಾತ್ರವಲ್ಲ ಇನ್ನೂ ಎರಡು ವಿಮಾನಗಳೂ ಡೈವರ್ಟ್ ಆಗಿದ್ದವು ಎಂದಿದ್ದಾರೆ. ಅಲ್ಲದೇ, ಸುರಕ್ಷತೆ ನಮಗೆ ಯಾವಾಗಲೂ ಮೊದಲ ಆದ್ಯತೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.