ಹುಬ್ಬಳ್ಳಿ: ಹುಬ್ಬಳ್ಳಿ-ಅರಸೀಕೆರೆ-ಹುಬ್ಬಳ್ಳಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16214/16213)ರೈಲಿನ ಸಾಂಪ್ರದಾಯಿಕ ಐಸಿಎಫ್ ಬೋಗಿಗಳನ್ನು ಬದಲಿಸಿ, ಅವುಗಳ ಬದಲಿಗೆ ಮೆಮು ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ಬದಲಾವಣೆಯು ಹುಬ್ಬಳ್ಳಿಯಿಂದ ಏಪ್ರಿಲ್ 24ರಿಂದ ಮತ್ತು ಅರಸೀಕೆರೆಯಿಂದ ಏಪ್ರಿಲ್ 25ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.






















