Home Advertisement
Home ಸುದ್ದಿ ದೇಶ ಪಹಲ್ಗಾಮ್ ದಾಳಿಗೆ ಒಂದು ವರ್ಷ: ‘ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ

ಪಹಲ್ಗಾಮ್ ದಾಳಿಗೆ ಒಂದು ವರ್ಷ: ‘ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ

0
80

ನವದೆಹಲಿ/ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ನಾಳೆ (ಏಪ್ರಿಲ್ 22) ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ದೇಶವ್ಯಾಪಿ ಸ್ಮರಣಾ ಕಾರ್ಯಕ್ರಮಗಳು ನಡೆಯುತ್ತಿವೆ. 2025ರ ಇದೇ ದಿನ ನಡೆದ ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು.

ಭಾರತೀಯ ಸೇನೆ (Indian Army) ಈ ದುರಂತದ ನೆನಪಿನಲ್ಲಿ ‘Operation Sindoor’ ಕಾರ್ಯಾಚರಣೆಯನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ತಕ್ಕ ಪ್ರತಿಕ್ರಿಯೆ ನೀಡಲಾಗಿದೆ ಎಂದು ಸ್ಪಷ್ಟ ಸಂದೇಶ ನೀಡಿದೆ. “ಮಾನವೀಯತೆ ಮಿತಿಯನ್ನು ಮೀರಿದಾಗ ಪ್ರತಿಕ್ರಿಯೆ ನಿರ್ಣಾಯಕವಾಗುತ್ತದೆ. ದೇಶದ ಸುರಕ್ಷತೆಗಾಗಿ ನಾವು ಸದಾ ಸಜ್ಜಾಗಿದ್ದೇವೆ” ಎಂದು ಸೇನೆ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಒಂದು ವರ್ಷವಾದರೂ ನೋವು ಜೀವಂತ : 2025ರ ಏಪ್ರಿಲ್ 22ರಂದು ಪಹಲ್ಗಾಮ್‌ (Pahalgam) ಸಮೀಪದ ಬೈಸರನ್ ವ್ಯಾಲಿ (Baisaran Valley) ಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಪ್ರವಾಸಿಗರನ್ನು ಒಟ್ಟುಗೂಡಿಸಿ, ಅವರ ಧರ್ಮವನ್ನು ಗುರುತಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಜೈಪುರ, ಗುಜರಾತ್ ಹಾಗೂ ಬೆಂಗಳೂರಿನ ಕುಟುಂಬಗಳೂ ಇದೇ ದುಃಖವನ್ನು ಇನ್ನೂ ಮರೆತಿಲ್ಲ. ಬೆಂಗಳೂರಿನ ಭರತ್ ಭೂಷಣ್ ಕುಟುಂಬವೂ ನೋವನ್ನು ನುಂಗಿಕೊಂಡೇ ಬದುಕುತ್ತಿದೆ. “ನಾವು ಅಳಲು ಕೂಡ ಭಯವಾಗುತ್ತದೆ” ಎಂಬ ಕುಟುಂಬದ ಮಾತು ದಾಳಿಯ ಭೀಕರತೆಯನ್ನು ತೋರಿಸುತ್ತದೆ.

ದಾಳಿಯ ಹಿನ್ನೆಲೆ ಮತ್ತು ಪ್ರತೀಕಾರ : ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ (Lashkar-e-Taiba)ಗೆ ಸಂಬಂಧಿಸಿದ ಸಂಘಟನೆ ಹೊತ್ತಿಕೊಂಡಿತ್ತು. ದಾಳಿಯ ನಂತರ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ‘ಆಪರೇಷನ್ ಸಿಂಧೂರ’ ಮೂಲಕ ತಕ್ಕ ಪ್ರತೀಕಾರ ತೀರಿಸಿಕೊಂಡಿತ್ತು.

ಶಾಂತಿ ಬಂದರೂ ನೆನಪು ಉಳಿದೇ ಇದೆ: ಪ್ರಸ್ತುತ ಪಹಲ್ಗಾಮ್ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಆ ದಿನದ ನೋವು ಇನ್ನೂ ಮಾಸಿಲ್ಲ. ಅವರ ಜೀವನದಲ್ಲಿ ಆ ದುರಂತದ ನೆನಪುಗಳು ಇಂದಿಗೂ ಕಾಡುತ್ತಿವೆ.