Home Advertisement
Home ಸುದ್ದಿ ದೇಶ ರಾಜ್ಯ ಸಭೆಗೆ ಹರಿವಂಶ್‌ ನಾಮನಿರ್ದೇಶನ : ರಾಷ್ಟ್ರಪತಿ ಮುರ್ಮು

ರಾಜ್ಯ ಸಭೆಗೆ ಹರಿವಂಶ್‌ ನಾಮನಿರ್ದೇಶನ : ರಾಷ್ಟ್ರಪತಿ ಮುರ್ಮು

0
112

ನವದೆಹಲಿ: ಜೇಡಿಯು (JDU) ಹಿರಿಯ ನಾಯಕ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ದ್ರೌಪದಿ ಮುರ್ಮು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಮೇಲ್ಮನೆಯ ಸದಸ್ಯರಾಗಿ ಅವರ ಅವಧಿ ಏಪ್ರಿಲ್ 9ರಂದು ಮುಕ್ತಾಯಗೊಂಡ ಹಿನ್ನೆಲೆ, ಖಾಲಿಯಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ. ಈ ಸ್ಥಾನವು ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನಿವೃತ್ತಿಯಿಂದ ತೆರವಾಗಿತ್ತು.

ಅಧಿಕೃತ ಅಧಿಸೂಚನೆ ಹೊರಬಂದಿದೆ: ಭಾರತ ಸಂವಿಧಾನದ ವಿಧಿ 80ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು, ರಾಷ್ಟ್ರಪತಿಗಳು ಈ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸರ್ಕಾರದ ಅಧಿಸೂಚನೆಯಲ್ಲಿ, “ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದ ಉಂಟಾದ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಹರಿವಂಶ್ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ತಿಳಿಸಲಾಗಿದೆ.

ಅನುಭವೀ ಸಂಸದ : 69 ವರ್ಷದ ಹರಿವಂಶ್ ನಾರಾಯಣ್ ಸಿಂಗ್ ಅವರು ಬಿಹಾರವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿ ಎರಡು ಅವಧಿ ಪೂರ್ಣಗೊಳಿಸಿದ್ದಾರೆ ರಾಜ್ಯಸಭೆಯ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಸದೀಯ ಅನುಭವ ಮತ್ತು ಆಡಳಿತದ ಅರಿವು ಹೊಂದಿರುವ ಅವರು, ಮೇಲ್ಮನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.