Home Advertisement
Home ಕೃಷಿ/ವಾಣಿಜ್ಯ ಚಿನ್ನ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ; ಅಕ್ಷಯ ತೃತೀಯ ಮುನ್ನವೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಚಿನ್ನ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ; ಅಕ್ಷಯ ತೃತೀಯ ಮುನ್ನವೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

0
36

ಚಿನ್ನ ಪ್ರಿಯರಿಗೆ ಗುರುವಾರ (ಇಂದು) ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿತ್ತು. ಹಾಗೇ ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಈ ಇಳಿಕೆ ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಇಂದು ಬೆಲೆಗಳು ಗಣನೀಯವಾಗಿ ಕುಸಿದಿವೆ. ವಿಶೇಷವಾಗಿ 100 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 17,600 ರೂ. ಇಳಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆಯಾಗಿದೆ. ಇಂದು 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ₹11,361 ಆಗಿದ್ದು, 10 ಗ್ರಾಂ ಬೆಲೆ ₹1,13,610 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹176 ಹಾಗೂ 10 ಗ್ರಾಂಗೆ ₹1,760 ಇಳಿಕೆಯಾಗಿದೆ.

ಇದೇ ರೀತಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕುಸಿತ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ₹13,885 ಆಗಿದ್ದು, 10 ಗ್ರಾಂಗೆ ₹1,38,850 ಆಗಿದೆ. ಏಪ್ರಿಲ್ ಮೊದಲ ವಾರದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹215 ಹಾಗೂ 10 ಗ್ರಾಂಗೆ ₹2,150 ಇಳಿಕೆಯಾಗಿದೆ. ಒಟ್ಟು 100 ಗ್ರಾಂ 1,88,500 ಆಗಿದ್ದು, ಬರೋಬ್ಬರಿ 21,500 ಹೆಚ್ಚಳ ಕಂಡಿದೆ.

24 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹15,148 ಹಾಗೂ 10 ಗ್ರಾಂ ಬೆಲೆ ₹1,51,480 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹234 ಹಾಗೂ 10 ಗ್ರಾಂಗೆ ₹2,340 ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ₹15,14,800 ಆಗಿದ್ದು, ಇದರಲ್ಲಿ ಬರೋಬ್ಬರಿ ₹23,400 ಇಳಿಕೆಯಾಗಿದೆ.

ಇನ್ನು ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಕಂಡಿದೆ. ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ ₹255 ಆಗಿದ್ದು, 1 ಕೆ.ಜಿ ಬೆಳ್ಳಿ ಬೆಲೆ ₹2,55,000 ಆಗಿದೆ. ಈ ಬೆಲೆ ಇಳಿಕೆ ಬಂಗಾರ ಹಾಗೂ ಬೆಳ್ಳಿ ಪ್ರಿಯರಲ್ಲಿ ಸಮಾಧಾನ ತಂದಿದೆ.