ಬಂಗಾರದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಇಂದು ಮಂಗಳವಾರ ಚಿನ್ನದ ಬೆಲೆ ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್ ಚಿನ್ನದ ಬೆಲೆ 13,810 ರೂನಿಂದ 13,735 ರೂಗೆ ಇಳಿದಿದ್ದು, ಗ್ರಾಮ್‌ಗೆ 75 ರೂ ಕಡಿಮೆವಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 14,984 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ, ಮುಂಬೈ ಮೊದಲಾದೆಡೆ 1 ಗ್ರಾಂಗೆ 250 ರೂ ಆಗಿದ್ದು, ಚೆನ್ನೈ ಮೊದಲಾದೆಡೆ 255 ರೂ ಇದೆ.

ಚಿನ್ನದ ಬೆಲೆ ಅಕ್ಷರಶಃ ಪ್ರಕ್ಷುಬ್ದತೆಯ ಸ್ವಭಾವ ಹೊಂದಿದೆ. ದಿನವೂ ಏರಿಳಿತಗಳನ್ನು ಕಾಣುತ್ತಿದ್ದು, ಒಂದೇ ದಿನದೊಳಗಿನ ಬೆಲೆಯ ಬದಲಾವಣೆಗಳು ಸಹ ಸಾಮಾನ್ಯ. ನಿನ್ನೆ ಬೆಳಿಗ್ಗೆ 165 ರೂ ಇಳಿದ ಚಿನ್ನದ ಬೆಲೆ ಸಂಜೆ 150 ರೂ ಏರಿತ್ತು. ಇವತ್ತು ಮಂಗಳವಾರ ಬೆಳಗ್ಗೆ 75 ರೂ ಕಡಿಮೆಯಾಗಿದ್ದು, ವಿದೇಶಗಳ ಮಾರುಕಟ್ಟೆಗಳಲ್ಲಿ ಸಹ ಇದೇ ರೀತಿಯ ಏರಿಳಿತಗಳು ಕಂಡುಬಂದಿವೆ.
ಈ ನಡುವೆ, ಬೆಳ್ಳಿ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,37,350 ರೂ ಆಗಿದ್ದು, 10 ಗ್ರಾಂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,49,840 ರೂ. 100 ಗ್ರಾಂ ಬೆಳ್ಳಿ ಬೆಲೆ 25,000 ರೂ ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನ 1,37,350 ರೂ ಆಗಿದ್ದು, 100 ಗ್ರಾಂ ಬೆಳ್ಳಿ 25,000 ರೂ ಆಗಿದೆ. ತಮಿಳುನಾಡು, ಕೇರಳ ಮೊದಲಾದ ಕೆಲ ಪ್ರದೇಶಗಳಲ್ಲಿ ಬೆಳ್ಳಿ ಬೆಲೆ 25,500 ರೂ ಆಗಿದೆ.





















