Home Advertisement
Home ನಮ್ಮ ಜಿಲ್ಲೆ ದಾವಣಗೆರೆ ‘ಸಾಲಗಾರರ ಚಾಂಪಿಯನ್’ ನರೇಂದ್ರ ಮೋದಿ

‘ಸಾಲಗಾರರ ಚಾಂಪಿಯನ್’ ನರೇಂದ್ರ ಮೋದಿ

0
18

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಆಯೋಗ ಕಾಯ್ದೆಯ ನಿಬಂಧನೆಯೊಳಗೆ ಮಾಡಿದ ಸಾಲಕ್ಕೆ ‘ಸಾಲದ ರಾಮಯ್ಯ’ ಎಂದು ಕರೆಯೋ ನೀವು, ನಿಬಂಧನೆಗೂ ಮೀರಿ ದೇಶದಲ್ಲಿ 190 ಲಕ್ಷ ಕೋಟಿ ಸಾಲ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಸಾಲಗಾರರ ಚಾಂಪಿಯನ್’ ಎಂದು ಕರೆಯಬೇಕೇ? ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸರ್ಕಾರ ದಿವಾಳಿಯಾಗಿದೆ. ಸಾಲ ಮಾಡಿ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ ಎಂಬೆಲ್ಲ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದಿನ ಎಲ್ಲಾ ಸರ್ಕಾರಗಳು ಮಾಡಿದ ಸಾಲ 53.11 ಲಕ್ಷ ಕೋಟಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮೋದಿಯವರು ಮಾಡಿದ ಸಾಲ 190 ಲಕ್ಷ ಕೋಟಿ ಇದೆ. ಆಗಾದರೆ ಮೋದಿಯವರನ್ನು ಸಾಲಗಾರರ ಚಾಂಪಿಯನ್ ಎಂದು ಕರೆಯಬೇಕೇ? ಎಂದು ಛಾಟಿ ಬೀಸಿದರು.

ಬಸವರಾಜ ಬೊಮ್ಮಾಯಿ ಅವರು 2.70 ಲಕ್ಷ ಕೋಟಿ ಕಾಮಗಾರಿಗೆ ಅನುಮೋದನೆ ನೀಡಿದರು. ಬಜೆಟ್ ಅನುಮೋದನೆ ಇಲ್ಲದೇ 3.5 ಲಕ್ಷ ಕೋಟಿ ಹೊರೆಯನ್ನು ನಮ್ಮ ಸರ್ಕಾರದ ಮೇಲೆ ಹೇರಿದರು. ಈ ಹೊರೆಯ ನಡುವೆಯೂ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ. ಆದರೂ ಸಿದ್ದರಾಮಯ್ಯ ಅವರನ್ನು ಸಾಲದ ರಾಮಯ್ಯ ಎಂದು ಕರೆಯುತ್ತಿದ್ದಾರೆ ಎಂದು ಗುಡುಗಿದರು.

ಅಲ್ಪಸಂಖ್ಯಾರಲ್ಲಿ ಅಸಮಾಧಾನವಿದೆ. ಸಮುದಾಯದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಆಗಂತ ಎಸ್‌ಡಿಪಿಐಗೆ ಮತ ಹಾಕುವುದಿಲ್ಲ. ಬಿಜೆಪಿ ಗೆಲ್ಲುವ ಅವಕಾಶ ನೀಡುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಗ್ಯಾರಂಟಿ, ಸರ್ಕಾರದ ಜನಪರ ಆಡಳಿತದಿಂದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಗೆಲುವು ಸಾಧಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.