Home Advertisement
Home ಕ್ರೀಡೆ IPL ಉದ್ಘಾಟನೆಗೆ ಬೆಂಗಳೂರು ಸಜ್ಜು: ಸ್ಟೇಡಿಯಂ ಸುತ್ತ ಭದ್ರತೆ ಹೀಗಿದೆ ನೋಡಿ

IPL ಉದ್ಘಾಟನೆಗೆ ಬೆಂಗಳೂರು ಸಜ್ಜು: ಸ್ಟೇಡಿಯಂ ಸುತ್ತ ಭದ್ರತೆ ಹೀಗಿದೆ ನೋಡಿ

0
114

ಬೆಂಗಳೂರು: ಈ ಬಾರಿಯ ಐಪಿಎಲ್‌ ಪಂದ್ಯಾವಳಿ ಉದ್ಘಾಟನೆಗೆ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಈ ಸಲ ಕಪ್‌ ನಮ್ದೇ… ಎನ್ನುತ್ತಾ 18ನೇ ಆವೃತ್ತಿಗೆ ಅಂದರೆ ಕಳೆದ ಬಾರಿಯೇ ಮೊಟ್ಟ ಮೊದಲ ಬಾರಿಗೆ ಆರ್‌ಸಿಬಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು, ಈ ಸಂಭ್ರಮಕ್ಕೆ ವಿಜಯೋತ್ಸವ ಸಂದರ್ಭ ನಡೆದ ದುರಂತದಿಂದಾಗಿ ಬೆಂಗಳೂರಿನಲ್ಲಿ ಪಂದ್ಯ ನಡಿಯುವುದೇ ಡೌಟ್‌ ಎನ್ನಲಾಗಿತ್ತು. ಆದರೆ, ಕೊನೆಗೆ ಮತ್ತೆ ಪಂದ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷ ಜೂನ್ 4ರಂದು ನಡೆದ ಕಾಲ್ತುಳಿತದಿಂದ ಮೃತಪಟ್ಟ 11 ಮಂದಿಯ ಸ್ಮರಣಾರ್ಥ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದಿನ ಪಂದ್ಯಕ್ಕಾಗಿ 11 ಆಸನಗಳನ್ನು ಖಾಲಿ ಬಿಡಲಾಗಿದೆ. ಪಿ1 ಗ್ಯಾಲರಿಯಲ್ಲಿ ಈ ಜಾಗ ಬಿಡಲಾಗಿದ್ದು, ಪಂದ್ಯದ ವೇಳೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಚಿನ್ನಸ್ವಾಮಿ ಪ್ರವೇಶ ದ್ವಾರಗಳು
ಕ್ವೀನ್ಸ್ ರಸ್ತೆಯ ಮೂಲಕ ಮಾತ್ರ ಪ್ರವೇಶ
7 ದ್ವಾರಗಳು ಮತ್ತು 28 ಪ್ರವೇಶ ದ್ವಾರಗಳಲ್ಲಿ ಅವಕಾಶ
ಸುಗಮ ಸಂಚಾರಕ್ಕಾಗಿ ದ್ವಾರಗಳನ್ನು 6 ಮೀಟರ್‌ಗೆ ವಿಸ್ತರಣೆ

ಪಾರ್ಕಿಂಗ್ ವ್ಯವಸ್ಥೆ: ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ. ಕಬ್ಬನ್ ಪಾರ್ಕ್

ಭದ್ರತೆ ಹೇಗಿದೆ?
ಎಐ ಆಧಾರಿತ ಪ್ರವೇಶ ನಿಯಂತ್ರಣ
500+ ಸಿಸಿಟಿವಿ ಕ್ಯಾಮೆರಾಗಳು
ಎಐ ಆಧಾರಿತ ಜನಸಂದಣಿ ವಿಶ್ಲೇಷಣೆ
ನಗರದ ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದೊಂದಿಗೆ ಏಕೀಕರಣ
ಟಿಕೆಟ್‌ಗಳಿಲ್ಲದೆ ಕ್ರೀಡಾಂಗಣದ ಬಳಿ ಓಡಾಟ ನಿಷೇಧ
ವೈದ್ಯಕೀಯ, ತುರ್ತು ಚಿಕಿತ್ಸೆ
ಸ್ಥಳದ ಸುತ್ತಲೂ 9 ಆಂಬ್ಯುಲೆನ್ಸ್‌ಗಳು
4 ವೈದ್ಯಕೀಯ ಚಿಕಿತ್ಸೆಯ ಕೇಂದ್ರಗಳು