SK Home Ad
Home ಸುದ್ದಿ ದೇಶ ರಾಜ್ಯ, ಕೇಂದ್ರ ಒಗ್ಗಟ್ಟಾಗಿ ಬಿಕ್ಕಟ್ಟನ್ನು ಎದುರಿಸೋಣ: ಮೋದಿ ಕರೆ

ರಾಜ್ಯ, ಕೇಂದ್ರ ಒಗ್ಗಟ್ಟಾಗಿ ಬಿಕ್ಕಟ್ಟನ್ನು ಎದುರಿಸೋಣ: ಮೋದಿ ಕರೆ

0
373

ನವದೆಹಲಿ: ಇಂಧನಕ್ಕೆ ಮೂಲವಾಗಿರುವ ಪಶ್ಚಿಮ ಏಷ್ಯಾ ಸಮರ ಬಿಕ್ಕಟ್ಟನ್ನು ಭಾರತದ ಎಲ್ಲ ರಾಜ್ಯಗಳೂ `ಟೀಂ ಇಂಡಿಯಾ’ ಮಾದರಿಯಲ್ಲಿ ಒಟ್ಟಾಗಿ, ಪರಸ್ಪರ ಸಹಯೋಗದೊಂದಿಗೆ ಎದುರಿಸಬೇಕು ಎಂದು ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.

ಜತೆಗೆ ದೇಶದ ಮೇಲೆ ಆಗಬಹುದಾದ ಯುದ್ಧ ಪರಿಣಾಮ ತಡೆಯಲು ಟೀಂ ಇಂಡಿಯಾ ರೀತಿಯ, ಸಚಿವ ರಾಜನಾಥ್ ಸಿಂಗ್ ನೇತೃತ್ವದ ತಂಡವೊಂದನ್ನು ರಚಿಸಿದ್ದು, ಅದರಲ್ಲಿ ಅಮಿತ್ ಶಾ, ಸೇರಿ ಇತರರಿದ್ದಾರೆ.

ದೇಶದ ಸಿಎಂಗಳ ಜತೆ ಶುಕ್ರವಾರ ಮೋದಿಯವರು ವಿಡಿಯೋ ಸಭೆ ನಡೆಸಿದ್ದು ಯುದ್ಧ ಬಿಕ್ಕಟ್ಟಿನ ದುಷ್ಪರಿಣಾಮವನ್ನು ಇಡೀ ದೇಶ `ಟೀಂ ಇಂಡಿಯಾ’ ಮಾದರಿ ಸ್ಫೂರ್ತಿಯೊಂದಿಗೆ ಒಟ್ಟಾಗಿ ಸವಾಲಾಗಿ ತೆಗೆದು ಕೊಂಡು ಹೋರಾಡುವ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡುವ ಉದ್ದೇಶದಿಂದಲೇ ಈ ಸಭೆ ಕರೆದಿದ್ದಾಗಿ ಹೇಳಲಾಗಿದೆ.