Home Advertisement
Home ಕೃಷಿ/ವಾಣಿಜ್ಯ ಬ್ಯಾಂಗಲ್ ಇಲ್ಲ ಬಂಗಾರನೂ ಇಲ್ಲ, ಚಿನ್ನದ ಬೆಲೆ ಮತ್ತೆ ಏರಿಕೆ; ಗೋಲ್ಡ್ ಹಾವು ಏಣಿ ಆಟ...

ಬ್ಯಾಂಗಲ್ ಇಲ್ಲ ಬಂಗಾರನೂ ಇಲ್ಲ, ಚಿನ್ನದ ಬೆಲೆ ಮತ್ತೆ ಏರಿಕೆ; ಗೋಲ್ಡ್ ಹಾವು ಏಣಿ ಆಟ ಇನ್ನೆಷ್ಟು ದಿನ?

0
32

ದಿನದಿಂದ ದಿನಕ್ಕೆ ಹಾವು ಏಣಿ ಆಟದಂತಾಗಿದೆ ಬಂಗಾರದ ದರ. ಹೌದು ಇನ್ನೇನು ಬಂಗಾರದ ಬೆಲೆ ಕಡಿಮೆಯಾಯ್ತು ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಕೊಂಡುಕೊಳ್ಳೋಣ ಅನ್ನೋ ಸಮಯಕ್ಕೆ ಮತ್ತೆ ಬಂಗಾರದ ಬೆಲೆ ಜಾಸ್ತಿಯಾಗಿದೆ. ನಿನ್ನೆ ಭರ್ಜರಿಯಾಗಿ ಏರಿದ್ದ ಬಂಗಾರದ ದರ ಇವತ್ತು ಗುರುವಾರ ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವೆಡೆ ಮಾತ್ರ ಬೆಲೆ ತುಸು ತಗ್ಗಿದೆ. ಇನ್ನು, ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ನಿನ್ನೆಯ ದರವೇ ಮುಂದುವರಿದಿದೆ.

ಹಾಗಾದರೆ ನಿನ್ನೆ 1 ಗ್ರಾಂ ಅಪರಂಜಿ ಚಿನ್ನದ ಬೆಲೆ ₹14,667 ಇದ್ದ ಶುದ್ಧ ಬಂಗಾರ ಇಂದು 1 ಗ್ರಾಂ ಅಪರಂಜಿ ಚಿನ್ನದ ಬೆಲೆ ₹14,689ಗೆ ಏರಿಕೆಯಾಗಿದೆ. ಇನ್ನು ನಿನ್ನೆ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,46,670 ಇದ್ದ ಶುದ್ಧ ಬಂಗಾರ ಇಂದು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,46,890ಗೆ ಏರಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆಯ ಕಥೆ ಹೀಗಿದ್ರೆ 22 ಕ್ಯಾರಟ್ ಚಿನ್ನದ ದರ ಕೇಳಿದ್ರೆ ಅಚ್ಚರಿಯಾಗ್ತೀರಾ. ನಿನ್ನೆ 1 ಗ್ರಾಂ ಚಿನ್ನದ ಬೆಲೆ ₹13,445 ಇದ್ದ ಬಂಗಾರ ಇಂದು 1 ಗ್ರಾಂ ಚಿನ್ನದ ಬೆಲೆ ₹13,465ಗೆ ಹೆಚ್ಚಳವಾಗಿದೆ.

ಇನ್ನು ನಿನ್ನೆ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,07,560 ಇದ್ದ ಬಂಗಾರದ ಬೆಲೆ ಇಂದು ₹1,07,720ಗೆ ಏರಿಕೆಯಾಗಿದೆ.

ಒಟ್ಟಾರೆ ನೋಡಿದರೆ, ಬಂಗಾರದ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿತ ಮುಂದುವರಿಯುತ್ತಿದ್ದು, ಖರೀದಿದಾರರಲ್ಲಿ ಗೊಂದಲ ಉಂಟಾಗಿದೆ. ಒಂದು ದಿನ ಕಡಿಮೆಯಾದಂತೆ ಕಾಣಿಸಿದರೆ, ಮತ್ತೊಂದು ದಿನ ಮತ್ತೆ ಏರಿಕೆಯಾಗುತ್ತಿರುವುದು ಮಾರುಕಟ್ಟೆಯ ಅನಿಶ್ಚಿತತೆಯನ್ನು ಸ್ಪಷ್ಟಪಡಿಸುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು, ಡಾಲರ್ ಮೌಲ್ಯ, ಮತ್ತು ಆರ್ಥಿಕ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಈ ರೀತಿಯ ವ್ಯತ್ಯಾಸಗಳು ಕಾಣಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಂಗಾರದ ದರ ಇನ್ನಷ್ಟು ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಖರೀದಿದಾರರು ಮತ್ತು ಹೂಡಿಕೆದಾರರು ಇಬ್ಬರೂ ಕೂಡ ಮಾರುಕಟ್ಟೆಯ ಮೇಲಿನ ಕಣ್ಣನ್ನು ತಪ್ಪಿಸದೆ ಕಾದು ನೋಡಬೇಕಾಗಿದೆ.