Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಇವರಿಗೆ ತಲೇಲಿ ಕಾಮನ್ ಸೆನ್ಸ್ ಇದೆಯಾ? ತಾರಕಕ್ಕೇರಿತು ಗುರು ದೇಶಪಾಂಡೆ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್...

ಇವರಿಗೆ ತಲೇಲಿ ಕಾಮನ್ ಸೆನ್ಸ್ ಇದೆಯಾ? ತಾರಕಕ್ಕೇರಿತು ಗುರು ದೇಶಪಾಂಡೆ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸ್ಟೋರಿ ವಾರ್‌!

0
30

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಲ್ಲಿ ವಿತರಣೆ ಮಾಡಿದೆ. ‘ಲವ್ ಮಾಕ್ಟೇಲ್’ ಸರಣಿಯ ಮೂರನೇ ಭಾಗಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಚಿತ್ರ ತಂಡ ಸಂತೋಷದಲ್ಲಿದೆ.

ಈ ನಡುವೆ, ನಿರ್ದೇಶಕರಾದ ಗುರುದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಅವರು ಡಾರ್ಲಿಂಗ್ ಕೃಷ್ಣ ವಿರುದ್ಧ ಕಥೆ ಕದ್ದಿರುವ ಆರೋಪ ಮಾಡಿದ್ದರು. ವಿಶೇಷವಾಗಿ, ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ನ್ಯಾಯಾಲಯದ ಸನ್ನಿವೇಶಗಳು ತಾವು ಹೇಳಿದ ಕಥೆಯ ಆಧಾರಿತವಾಗಿವೆ ಎಂದು ಅವರು ಹೇಳಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಇಂದು ಪ್ರೆಸ್ ಮೀಟ್ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಹಿಂದೆ ಎಷ್ಟು ಪರಿಶ್ರಮ ಇದೆ ಅಂತ ನಮಗೆ ಅಷ್ಟೇ ಗೊತ್ತು. ಡಾರ್ಲಿಂಗ್ ಕೃಷ್ಣ ಇಸ್ ರೈಟೆರ್. ಡೈರೆಕ್ಟರ್ ಫಸ್ಟ್ ನಾನು ಕಥೆ ಬರೆದಿದ್ದು, ನಾಲ್ಕು ವರ್ಷ ಈ ಕಥೆ ಬರೆದಿದ್ದು. ಬರೆದ ಮೇಲೆ ನಾನು ಡೈರೆಕ್ಟರ್ ಆಗಿದ್ದು. ಅನ್ಯಾಯ ಆಗಬಾರದು. ಗೂಗಲ್‌ನಲ್ಲಿ ಸಿಗೋ ಕಥೆ ತೆಗೆದುಕೊಂಡು ಬಂದು ಇದು ನನ್ನ ಕಥೆ ಅಂತಾರಲ್ಲ ಇವರಿಗೆ ಏನಾದ್ರು ತಲೇಲಿ ಕಾಮನ್ ಸೆನ್ಸ್ ಇದೆಯಾ ಎಂದು ಡಾರ್ಲಿಂಗ್ ಕೃಷ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಡಾರ್ಲಿಂಗ್ ಕೃಷ್ಣ ಒಬ್ಬ ಮೇಕರ್‌ಗೆ ಇದಕ್ಕಿಂತ ಒಂದು ಅವಮಾನ ಮಾಡೋದು ಇದೆಯಾ. ನಾನು ರೈಟರ್, ರೈಟರ್ ಅಂತ ಹೇಳಿಕೊಂಡು ತಿರುಗಾಡುತ್ತಾರಲ್ಲ ನಮಗೆಷ್ಟು ಮರ್ಯಾದೆ ಹೋಗಿದೆ. ನಾನು ಅದಕೋಸ್ಕರ ಲೆಜೆಂಡರಿ ಡೈರೆಕ್ಟರ್ ಗುರು ದೇಶಪಾಂಡೆ ಲೆಜೆಂಡರಿ ರೈಟೆರ್ ಸೋ ಕಾಲ್ಡ್ ರಾಘವೇಂದ್ರ ನಾಯಕ್ ಇವರ ಮೇಲೆ ಲೀಗಲ್ ಆಗಿ ಆಕ್ಷನ್ ತೆಗೆದುಕೊಳ್ಳುತ್ತಾ ಇದ್ದೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.