Home Advertisement
Home ಸುದ್ದಿ ದೇಶ ವದಂತಿಗೆ ಬ್ರೇಕ್ -LPG ಬುಕಿಂಗ್ ಬದಲಾಗಿಲ್ಲ: ಸರ್ಕಾರದಿಂದ ಸ್ಪಷ್ಟನೆ

ವದಂತಿಗೆ ಬ್ರೇಕ್ -LPG ಬುಕಿಂಗ್ ಬದಲಾಗಿಲ್ಲ: ಸರ್ಕಾರದಿಂದ ಸ್ಪಷ್ಟನೆ

0
291

ನವದೆಹಲಿ: ಎಲ್‌ಪಿಜಿ ಬುಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ – ವದಂತಿಗಳಿಗೆ ಬಲಿಯಾಗಬೇಡಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಮರುಪೂರಣ (refill) ಬುಕಿಂಗ್ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಇಂತಹ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MPNG) ಈ ಕುರಿತು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ಏನು ವದಂತಿ ಹರಡಿತ್ತು? : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಸುದ್ದಿ ವರದಿಗಳಲ್ಲಿ ಪಿಎಂಯುವೈ (PMUY) ಹಾಗೂ ಇತರೆ ಎಲ್‌ಪಿಜಿ ಸಂಪರ್ಕಗಳಿಗೆ ವಿಭಿನ್ನ ಬುಕಿಂಗ್ ಅವಧಿ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ವೈರಲ್ ಆಗಿತ್ತು. ಇದರಲ್ಲಿ ಪಿಎಂಯುವೈ ಸಂಪರ್ಕಗಳಿಗೆ 45 ದಿನ, ಸಿಂಗಲ್ ಬಾಟಲ್ ಸಂಪರ್ಕಗಳಿಗೆ 25 ದಿನ ಹಾಗೂ ಡಬಲ್ ಬಾಟಲ್ ಸಂಪರ್ಕಗಳಿಗೆ 35 ದಿನಗಳ ಕಾಯುವ ಅವಧಿ ಇರಲಿದೆ ಎಂಬ ಹೊಸ ಸಮಯ ಮಿತಿಗಳನ್ನು ಜಾರಿಗೊಳಿಸಲಾಗಿದೆ ಎಂಬ ಮಾಹಿತಿ ವೈರಲ್ ಆಗಿತ್ತು.

ಸರ್ಕಾರದ ಸ್ಪಷ್ಟನೆ : ಆದರೆ (PIB) ಮಾರ್ಚ್ 25, 2026ರಂದು ನೀಡಿದ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಪ್ಪು ಎಂದು ಘೋಷಿಸಿದೆ. ಮಾರ್ಚ್ 25ರಂದು ಬಿಡುಗಡೆಗೊಂಡ ಪ್ರಕಟಣೆಯಲ್ಲಿ, “ಇಂತಹ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಸ್ತಿತ್ವದಲ್ಲಿರುವ ನಿಯಮಗಳು ಮುಂದುವರಿಯುತ್ತವೆ” ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮ : ನಗರ ಪ್ರದೇಶಗಳಲ್ಲಿ: 25 ದಿನಗಳ ಬಳಿಕ ಮರುಪೂರಣ ಬುಕ್ಕಿಂಗ್, ಗ್ರಾಮೀಣ ಪ್ರದೇಶಗಳಲ್ಲಿ: 45 ದಿನಗಳ ಬಳಿಕ ಮರುಪೂರಣ ಬುಕ್ಕಿಂಗ್ ಈ ನಿಯಮಗಳು ಹಿಂದಿನಂತೆಯೇ ಮುಂದುವರಿಯುತ್ತವೆ. PMUY ಮತ್ತು ಇತರೆ ಸಂಪರ್ಕಗಳಿಗೆ ಪ್ರತ್ಯೇಕ ನಿಯಮಗಳೇ ಇಲ್ಲ.

ಸಾರ್ವಜನಿಕರಿಗೆ ಎಚ್ಚರಿಕೆ : ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಪರಿಶೀಲಿಸದ ಮಾಹಿತಿಯನ್ನು ನಂಬಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ಮನವಿ ಮಾಡಿದೆ. ಜೊತೆಗೆ ದೇಶಾದ್ಯಂತ ಎಲ್‌ಪಿಜಿ ಪೂರೈಕೆ ಸಮರ್ಪಕವಾಗಿದ್ದು, ಆತಂಕದಿಂದ ಹೆಚ್ಚುವರಿ ಸಿಲಿಂಡರ್ ಬುಕ್ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಪರಿಶೀಲಿಸದ ಮಾಹಿತಿಯನ್ನು ನಂಬಬೇಡಿ : ಇಂತಹ ವದಂತಿಗಳು ಅನಗತ್ಯ ಗೊಂದಲ ಮತ್ತು ಪ್ಯಾನಿಕ್ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆಯುವಂತೆ ಸರ್ಕಾರ ಕರೆ ನೀಡಿದೆ. ಸರ್ಕಾರ ಸ್ಪಷ್ಟಪಡಿಸಿದಂತೆ, ದೇಶಾದ್ಯಂತ ಎಲ್‌ಪಿಜಿ ಪೂರೈಕೆ ಸಮರ್ಪಕವಾಗಿದ್ದು ಯಾವುದೇ ಕೊರತೆ ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇಂತಹ ವದಂತಿಗಳು ಸಾಮಾನ್ಯ ಜನರಲ್ಲಿ ಆತಂಕ ಉಂಟುಮಾಡುವಷ್ಟೇ ಅಲ್ಲ, ಪೂರೈಕೆ ವ್ಯವಸ್ಥೆಯ ಮೇಲೂ ಒತ್ತಡ ತರುತ್ತವೆ. ಹೀಗಾಗಿ ಅಧಿಕೃತ ಮೂಲಗಳ ಮಾಹಿತಿಯನ್ನೇ ನಂಬುವುದು ಅತ್ಯಂತ ಮುಖ್ಯ.