Home Advertisement
Home ಕೃಷಿ/ವಾಣಿಜ್ಯ ಇರಾನ್ ಯುದ್ಧದ ಮಧ್ಯೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬಂಗಾರದ ಖರೀದಿಗೆ ಇದೇ ಗೋಲ್ಡನ್ ಚಾನ್ಸ್!

ಇರಾನ್ ಯುದ್ಧದ ಮಧ್ಯೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬಂಗಾರದ ಖರೀದಿಗೆ ಇದೇ ಗೋಲ್ಡನ್ ಚಾನ್ಸ್!

0
53

ಯುದ್ಧ, ಸಂಘರ್ಷ ಮತ್ತು ತೈಲ ಅಭಾವದ ಆತಂಕ, ಮಧ್ಯಪ್ರಾಚ್ಯದ ಉದ್ವಿಗ್ನತೆಯ ಮಧ್ಯೆಯೂ ಗುಡ್‌ನ್ಯೂಸ್‌ ಸಿಕ್ಕಿದೆ. ಮದುವೆ ಸೀಸನ್ ಶುರುವಾಗಿದ್ದೇ ತಡ, ಜನರಿಗೆ ಚಿನ್ನ ಖರೀದಿಸುವ ಆಸೆ ಡಬಲ್ ಆಗಿದೆ. ಇಂದು ಚಿನ್ನದ ಜೊತೆಗೆ ಬೆಳ್ಳಿ ರೇಟ್ ಕೂಡ ಪಾತಾಳಕ್ಕೆ ಕುಸಿದಿದ್ದು, ಆಭರಣ ಪ್ರಿಯರಿಗೆ ಇದೊಂದು ಭರ್ಜರಿ ಗಿಫ್ಟ್ ಚಿನ್ನ ಖರೀದಿದಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿತ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ನಿನ್ನೆ ಒಂದು ಗ್ರಾಂಗೆ ₹14,597 ಇದ್ದ ಅಪರಂಜಿ ಚಿನ್ನ ಇಂದು ₹13,565 ರೂಪಾಯಿಗೆ ಇಳಿಕೆಯಾಗಿದೆ. ಇನ್ನು 22 ಕ್ಯಾರಟ್ ಚಿನ್ನ ನಿನ್ನೆ ₹13,380 ಇದ್ದ ಚಿನ್ನ ಇಂದು 12,435 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ನಿನ್ನೆ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹1,45,970 ಇದ್ದು ಇಂದು 1,35,650 ರೂಪಾಯಿಗೆ ಇಳಿಕೆಯಾಗಿದೆ. ನಿನ್ನೆ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,33,800 ಇದ್ದು ಇಂದು 1,24,350 ರೂಪಾಯಿಗೆ ಇಳಿಕೆಯಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ/ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆ ಹೆಚ್ಚಾಗಿದ್ದು, ಜಾಗತಿಕ ತೈಲ ಬೆಲೆ ಏರಿಕೆಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬೆದರಿಕೆಗಳು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್‌ಗೆ ನೀಡಿದ 48 ಗಂಟೆಗಳ ಗಡುವು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬಡ್ಡಿದರ ಹೆಚ್ಚಳದ ನಿರೀಕ್ಷೆಗಳು ಚಿನ್ನದ ಬೆಲೆಯ ಮೇಲೆ ಒತ್ತಡ ಹೇರಿವೆ ಎಂದು ಮೂಲಗಳು ತಿಳಿಸಿವೆ.