Home Advertisement
Home ಸುದ್ದಿ ದೇಶ ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿ ಗ್ಯಾಸ್ ಪೂರೈಕೆ ಬಗ್ಗೆ ಆತಂಕ ಬೇಡ

ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿ ಗ್ಯಾಸ್ ಪೂರೈಕೆ ಬಗ್ಗೆ ಆತಂಕ ಬೇಡ

0
1735

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಲ್ಲ, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ತೊಂದರೆ ಆಗದೇ ಇರುವಂತೆ ನೋಡಿಕೊಳ್ಳುವುದು ಸರ್ಕಾರಕ್ಕೆ ಆದ್ಯತೆ ಆಗಿದೆ. ಅದಕ್ಕಾಗಿ ಆರಂಭಿಕ ಸಿದ್ಧತೆಯನ್ನು ಭಾರತ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಈ ಮೊದಲು 27 ದೇಶಗಳಿಂದ ತರಿಸಿಕೊಳ್ಳಲಾಗುತ್ತಿದ್ದ ತೈಲವನ್ನು ಈಗ 41ಕ್ಕೆ ಏರಿಸಲಾಗಿದೆ. ಒಂದೆಡೆ ಯುದ್ಧ ನಡೆಯುತ್ತಿದ್ದರೆ, ಇನ್ನೊಂದಡೆ ಭಾರತ ಬೇರೆ ಬೇರೆ ದೇಶಗಳ ಜತೆ ಸಂಪರ್ಕವನ್ನು ಇಟ್ಟುಕೊಂಡು ತೈಲ, ಅನಿಲ ಮತ್ತು ರಸಗೊಬ್ಬರವನ್ನು ತರಿಸಿಕೊಳ್ಳುತ್ತಿದ್ದೆ ಎಂದರು.

ತೈಲ ಸಮಸ್ಯೆ ಇಲ್ಲ: ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಅಂದರೆ ಆಪತ್ಕಾಲದ ತೈಲ ಸಂಗ್ರಹ ಸದ್ಯ 5.3 ಮಿಲಿಯನ್ ಟನ್ ದಾಟಿದ್ದು, 6.5 ಮಿಲಿಯನ್ ಟನ್‌ಗೆ ಹೆಚ್ಚಿಸುವ ಕಾರ್ಯ ನಡೆದಿದೆ. ತೈಲ ಕಂಪನಿಗಳ ಬಳಿಯೂ ಅವರದ್ದೇ ಆದ ದೊಡ್ಡ ಸಂಗ್ರಹ ಇದೆ. ಹೀಗಾಗಿ ಎಂಥದ್ದೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.