Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಶುಭದಿನ ಎಂದು ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದೇವೆ

ಶುಭದಿನ ಎಂದು ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದೇವೆ

0
82

ದಾವಣಗೆರೆ: ದಾವಣಗೆರೆ ಜನರ ಬೆಂಬಲ, ನಿರೀಕ್ಷೆ ಕಾರಣಕ್ಕೆ ಬಿ ಫಾರಂ ಇಲ್ಲದೇ ಇದ್ದರೂ ಯುಗಾದಿ ಮತ್ತು ರಂಜಾನ್ ಹಬ್ಬ ಬಂದಿರುವ ಕಾರಣ ಶುಭದಿನ ಎಂದು ಇಂದೇ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಕ್ಷೇತ್ರದಲ್ಲಿ ರಕ್ಷಾ ಕವಚದಂತಿವೆ. ಯುವಕರು ರಾಜಕೀಯಕ್ಕೆ ಬರಬೇಕು ಯಾಕೆಂದರೆ ಅವರದ್ದೇ ಕಲ್ಪನೆ. ದೃಷ್ಟಿಕೋನಗಳಿರುತ್ತವೆ. ಆದ್ದರಿಂದಲೇ ಸಮರ್ಥ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಎನ್ನುವ ಮೂಲಕ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಸಮರ್ಥ್ ಅವರಿಗೆ ಸಿಕ್ಕಿರುವ ಮುನ್ಸೂಚನೆಯನ್ನು ಸಂಸದೆ ಪ್ರಭಾ ನೀಡಿದರು.