ಸಾಲ ತೀರಿಸಿದ ರೈತನಿಗೆ ಪೈಸೆ ಲೆಕ್ಕ: ₹10 ನೀಡಿ ಸಾಲ ಕ್ಲಿಯರ್ – 66 ಪೈಸೆಗಾಗಿ ಪಟ್ಟು ಹಿಡಿದ ಗ್ರಾಹಕ
ಹಾಸನ: ರೈತನೊಬ್ಬ ಬ್ಯಾಂಕ್‌ಗೆ ತೆರಳಿ 66 ಪೈಸೆ ವಾಪಸ್ ನೀಡಿ ಎಂದು ಪಟ್ಟು ಹಿಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ ₹9.34 ಪೈಸೆ ಬಾಕಿ ಉಳಿದಿದೆ ಎಂದು ಕರೆ ಮಾಡಿದ ಹಿನ್ನೆಲೆಯಲ್ಲಿ ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಗ್ರಾಹಕರಾದ ಚೊಕ್ಕಣ್ಣ ಗೌಡ ಅವರು 15–20 ವರ್ಷಗಳಿಂದ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಹಲವು ವರ್ಷಗಳ ಹಿಂದೆ ಪಡೆದ ₹50 ಸಾವಿರ ಬೆಳೆಸಾಲವನ್ನು ಬಡ್ಡಿ ಸಮೇತ ಪೂರ್ಣವಾಗಿ ತೀರಿಸಿದ್ದಾಗಿ ತಿಳಿಸಿದ್ದಾರೆ.
ಆದರೆ ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿಯಿಂದ ₹9.34 ಪೈಸೆ ಬಾಕಿ ಇದೆ ಎಂದು ಕರೆ ಬಂದ ಹಿನ್ನೆಲೆಯಲ್ಲಿ ಅವರು ಶಾಖೆಗೆ ತೆರಳಿ ₹10 ನೀಡಿ ಸಾಲ ಕ್ಲಿಯರ್ ಮಾಡಿದ್ದಾರೆ. ರಸೀದಿಯಲ್ಲಿ ₹9.34 ಮಾತ್ರ ಉಲ್ಲೇಖಿಸಿದ್ದರಿಂದ ಉಳಿದ 66 ಪೈಸೆ ವಾಪಸ್ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ರಾಜಕೀಯ ಕಾದಾಟ ತೀವ್ರ: ಮಾಜಿ CM ಪನ್ನೀರ ಸೆಲ್ವಂ DMK ಸೇರ್ಪಡೆ
ಈ ವೇಳೆ “ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ಕ್ರಮ ಇಲ್ಲ, ಆದರೆ ಸಾಲ ತೀರಿಸಿದ ಬಡ ರೈತರಿಗೆ ತೊಂದರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ಯಾಂಕ್ ವ್ಯವಸ್ಥೆಯ ಲೆಕ್ಕಪತ್ರ ವಿಧಾನಗಳ ಕುರಿತು ಚರ್ಚೆ ಆರಂಭವಾಗಿದೆ. ಶಾಖೆ ಮಟ್ಟದಲ್ಲಿ ತಾಂತ್ರಿಕ ಲೆಕ್ಕದ ವ್ಯತ್ಯಾಸದಿಂದ ಕರೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.






















