SK Home Ad
Home ಸುದ್ದಿ ದೇಶ ಕ್ಯಾಪ್ಟನ್ ಅಮನ್‌ಕುಮಾರ್‌ ಸಿಂಗ್‌ ಹೃದಯಾಘಾತಕ್ಕೆ ಬಲಿ

ಕ್ಯಾಪ್ಟನ್ ಅಮನ್‌ಕುಮಾರ್‌ ಸಿಂಗ್‌ ಹೃದಯಾಘಾತಕ್ಕೆ ಬಲಿ

0
731

ಲಕ್ನೋ: ಕ್ಯಾಪ್ಟನ್ ಅಮನ್‌ ಕುಮಾರ್‌ ಸಿಂಗ್‌ (22) ಹೃದಯಾಘಾತದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಧನರಾದರು.

ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೇ ಅಮನ್ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರಕ್ಕೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ನೀಡುತ್ತಿರುವಾಗಲೇ ನಿಧನರಾಗಿದ್ದಾರೆ.

ಉತ್ತರ ಪ್ರದೇಶದ ಕುಶಿನಗರದ ಅಬ್ದುಲ್ ಹಮೀದ್ ನಗರದ ಅಮನ್ ಅವರನ್ನು ಒಂದು ವರ್ಷದ ಕಾಲ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಇದನ್ನೂ ಓದಿ: ಮಹಿಳಾ ಆರೋಗ್ಯಕ್ಕೆ ಬೃಹತ್ ರಕ್ಷಣಾ ಕವಚ: ದೇಶಾದ್ಯಂತ HPV ಲಸಿಕಾ ಅಭಿಯಾನ

ಇನ್ನು ಅಮನ್‌ ಸಾವಿನ ಸುದ್ದಿ ಕುಶಿನಗರದ ಅಬ್ದುಲ್ ಹಮೀದ್ ನಗರಕ್ಕೆ ತಿಳಿಯುತ್ತಿದ್ದಂತೆ ಅವರ ಗ್ರಾಮದ ಮಸೀದಿಯಲ್ಲಿ ಆಜಾನ್ ಶಬ್ದವನ್ನು ಕಡಿಮೆ ಮಾಡಲಾಗಿತ್ತು. ಸಮುದಾಯದ ಜನರು ಕೂಡ ಅವರ ಕುಟುಂಬದವರೊಂದಿಗೆ ದುಃಖದಲ್ಲಿ ಭಾಗಿಯಾದರು.